ಚಿತ್ರದುರ್ಗ | ಸ್ವದೇಶಿ ಮೇಳದಲ್ಲಿಂದು ಸೂತ್ರ ಸಲಾಕೆ ಗೊಂಬೆಯಾಟ

2 Min Read

ಚಿತ್ರದುರ್ಗ | ಸ್ವದೇಶಿ ಮೇಳದಲ್ಲಿಂದು ಸೂತ್ರ ಸಲಾಕೆ ಗೊಂಬೆಯಾಟ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 16 :
ಸ್ವದೇಶೀ ಮೇಳದಲ್ಲಿ ಇಂದು ಇಂದು 16 ನವೆಂಬರ್, ಭಾನುವಾರ ಸಂಜೆ ಸಂಸ್ಕಾರ ಭಾರತೀ ಸಹಯೋಗದಲ್ಲಿ ಶ್ರೀ ಎಂ. ಆರ್. ಶ್ರೀನಿವಾಸ್, ರಂಗಪುತ್ಥಳಿ ಕಲಾವಿದರು ಬೆಂಗಳೂರು ಇವರ ತಂಡದ ವತಿಯಿಂದ ಸೂತ್ರ ಸಲಾಕೆ ಗೊಂಬೆಯಾಟ ಪ್ರಮುಖ ಆಕರ್ಷಣೆಯಾಗಿದೆ.

ಸ್ವದೇಶೀ ಮೇಳ 2025 ಚಿತ್ರದುರ್ಗ ಕಾರ್ಯಕ್ರಮದಲ್ಲಿ ಇಂದು 16 ನವೆಂಬರ್ 2025, ಭಾನುವಾರ ಸಂಸ್ಕಾರ ಭಾರತೀ ಸಹಯೋಗದಲ್ಲಿ ಸಾಂದರ್ಭಿಕ ದೇಶಭಕ್ತಿಗೀತೆಗಳು ಕುಟುಂಬ ಪ್ರಬೋಧನ ಕಾರ್ಯಕ್ರಮದಲ್ಲಿ ಜ್ಞಾನಭಾರತೀ ಶಾಲೆಯ ವಿದ್ಯಾರ್ಥಿಗಳಿಂದ ನೆರವೇರಲಿದ್ದು, ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ವೈಯಕ್ತಿಕ ಗೀತೆಯನ್ನು ಜ್ಞಾನಭಾರತೀ ಶಾಲೆಯ ಪ್ರಿನ್ಸಿಪಾಲ್ ಪ್ರಜ್ವಲ್ ರವರಿಂದ, ವಂದೇ ಮಾತರಂ ಗೀತೆಯನ್ನು ಸಂಸ್ಕಾರ ಭಾರತೀ ತಂಡದ ವಿದುಷಿ ಮೀನಾಕ್ಷಿ ಭಟ್ ರವರು ನಡೆಸಿಕೊಡಲಿದ್ದಾರೆ.

 

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಸ್ಕಾರ ಭಾರತೀ ಧ್ಯೇಯಗೀತೆಯನ್ನು ಸಂಸ್ಕಾರ ಭಾರತೀ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಗುರುರಾಜ್ ರವರು, ಸ್ವಾಗತವನ್ನು ಶ್ರೀಮತಿ ವರಲಕ್ಷ್ಮಿ ಯವರು ಪ್ರಾಂತ ಮಾತೃಶಕ್ತಿ ವಿಭಾಗದ ಸಹ ಪ್ರಮುಖ್ ರವರು ಹಾಗೂ ವಂದನಾರ್ಪಣೆಯನ್ನು ಸಂಸ್ಕಾರ ಭಾರತೀ ಪ್ರಾಂತ ಕಾರ್ಯದರ್ಶಿಗಳಾದ ಮಾರುತಿ ಮೋಹನ್ ನೆರವೇರಿಸಿಕೊಡಲಿದ್ದಾರೆ. ಇಂದಿನ ನಿರೂಪಣೆಯನ್ನು ಶ್ರೀಮತಿ ಚಂದ್ರಿಕಾ ಸುರೇಶ್ ಸಾಹಿತ್ಯ ವಿಭಾಗ ಪ್ರಮುಖರು ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿ ನೆರವೇರಿಸಲಿದ್ದು, ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ನಿರ್ವಹಣೆ ಜವಾಬ್ದಾರಿಯನ್ನು ಪ್ರಾಂತ ಸಾಹಿತ್ಯ ವಿಭಾಗ ಪ್ರಮುಖ್ ಡಾ. ರಾಜೀವಲೋಚನ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ವರಲಕ್ಷ್ಮಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀ ನವೀನ್ ಕುಮಾರ್, ಶ್ರೀಮತಿ ಡಾ. ಯಶೋಧ ರಾಜಶೇಖರಪ್ಪ ನೆರವೇರಿಸಲಿದ್ದಾರೆ.

ಸ್ವದೇಶೀ ಜಾಗರಣ ಮಂಚ್ ಕರ್ನಾಟಕ ಪ್ರಾಂತ ಆಯೋಜಿಸಿರುವ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಸ್ಕಾರ ಭಾರತೀ ಸಹಯೋಗವಿರುವ
ಸ್ವದೇಶೀ ಮೇಳದಲ್ಲಿ ಇಂದು ಇಂದು 16 ನವೆಂಬರ್ 2025 ಭಾನುವಾರ ಸಂಜೆ ಶ್ರೀ ಎಂ. ಆರ್. ಶ್ರೀನಿವಾಸ್, ರಂಗಪುತ್ಥಳಿ ಕಲಾವಿದರು ಬೆಂಗಳೂರು ಇವರ ತಂಡದ ವತಿಯಿಂದ ಶ್ರೀ ಕೃಷ್ಣಪಾರಿಜಾತ ಹಾಗೂ ನರಕಾಸುರ ವಧೆ ಕಲಾ ಪ್ರಸ್ತುತಿಯ ಸೂತ್ರ ಸಲಾಕೆ ಗೊಂಬೆಯಾಟ ಪ್ರಮುಖ ಆಕರ್ಷಣೆಯಾಗಿರುತ್ತದೆ ಎಂದು ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಉಮೇಶ್ ವೀರಣ್ಣ ತುಪ್ಪದ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ರಾವ್ ಮಾಹಿತಿ ನೀಡಿದ್ದಾರೆ.

Share This Article