ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 17 : ತಾಲ್ಲೂಕಿನ ಹಾಯ್ಕಲ್ ಗ್ರಾಮದ ನಿವಾಸಿ, ಎ.ಆರ್.ಸುಮಿತ್ರಮ್ಮ ಬ್ರಹ್ಮಕುಮಾರಿ (76 ವರ್ಷ) ಅವರು ಸೋಮವಾರ ನಿಧನರಾಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಹಾಗೂ ವಕೀಲ ಬಾಬುರೆಡ್ಡಿ ಅವರ ಚಿಕ್ಕಮ್ಮ ಎ.ಆರ್.ಸುಮಿತ್ರಮ್ಮ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ಬೆಳಗಿನ ಜಾವ ಚಿತ್ರದುರ್ಗ ನಗರದ ಕೆಳಗೋಟೆಯ ಮನೆಯಲ್ಲಿ ದೈವಾಧೀನರಾಗಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸೋಮವಾರ ಸಂಜೆ 4ಕ್ಕೆ ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.




