ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ.ಏ:17: ಜಿಲ್ಲೆಯಲ್ಲಿ ಏ.17 ರಂದು 25 ನಾಮಪತ್ರ ಸಲ್ಲಿಕೆಯಾಗಿವೆ.
ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಭಾರತಿಯ ಜನತಾ ಪಾರ್ಟಿಯ ಚಳ್ಳಕೆರೆ ತಾಲೂಕು ನೇರಲಗುಂಟೆ ಗ್ರಾಮದ ಎಸ್.ತಿಪ್ಪೇಸ್ವಾಮಿ 2 ಹಾಗೂ ಪಕ್ಷೇತರ ಅಭ್ಯರ್ಥಿ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಎನ್.ಮಲ್ಲಯ್ಯ ಅಲಿಯಾಸ್ ಎನ್.ಮಲ್ಲಣ್ಣ ಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಜ್ಯಾತ್ಯಾತೀತ ಜನತಾ ದಳ ಪಕ್ಷದ ಬೆಂಗಳೂರಿನ ರವೀಶ್ ಕುಮಾರ್.ಎಂ 2 ಹಾಗೂ ಆಮ್ ಆದ್ಮಿ ಪಾರ್ಟಿಯಿಂದ ಚಳ್ಳಕೆರೆ ಪಟ್ಟಣದ ಪಾಪಣ್ಣ.ಬಿ ಹಾಗೂ ಮಾರಕ್ಕ ಭಾರತೀಯ ಜನತಾ ಪಾರ್ಟಿಯಿಂದ ತುಮಕೂರಿನ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಚಿತ್ರದುರ್ಗ ನಗರದ ಕೆ.ಎಸ್.ವಿಜಯ ಸರ್ವೋದಯ ಕರ್ನಾಟಕ ಪಕ್ಷದಿಂದ, ಶ್ರೀನಿವಾಸ. ಹೆಚ್ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಹಾಗೂ ಪಕ್ಷೇತರರಾಗಿ ಸೈಯದ್ ಅಫಾನ್ ಅಹಮದ್ ನಾಮಪತ್ರ ಸಲ್ಲಿಸಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಬೆಂಗಳೂರಿನ ಕೆ.ಪೂರ್ಣಿಮಾ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಹಿರಿಯೂರು ತಾಲೂಕಿನ ಅಮ್ಮನಹಟ್ಟಿ ಗ್ರಾಮದ ಈ.ಪಾತಲಿಂಗಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಚಳ್ಳಕೆರೆ ತಾಲೂಕು ಸಿರದಾರ ಕಪಿಲೆ ಗ್ರಾಮದ ವಿನಯ್.ಎಸ್, ಜ್ಯಾತ್ಯಾತೀತ ಜನತಾ ದಳದಿಂದ ಹಿರಿಯೂರು ತಾಲೂಕು ಮುಂಗಸವಳ್ಳಿ ಸೂಗೂರು ಗ್ರಾಮದ ಎಂ.ರವೀಂದ್ರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರಿನ ಬಿ.ಶಶಿಕಲಾ ನಾಮಪತ್ರ ಸಲ್ಲಿಸಿದ್ದಾರೆ.
ಹೊಸದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಹೊಸದುರ್ಗ ತಾಲೂಕಿನ ಶಿವನಕುಂಟೆ ಗ್ರಾಮದ ಎಸ್.ಲಿಂಗಮೂರ್ತಿ, ಇಂಡಿಯನ್ ನ್ಯಾಷಿನಲ್ ಕಾಂಗ್ರೆಸ್ ಪಕ್ಷದಿಂದ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ಬಿ.ಜಿ.ಗೋವಿಂದಪ್ಪ, ಜ್ಯಾತ್ಯಾತೀತ ಜನತಾ ದಳದಿಂದ ಹೊಸದುರ್ಗ ಪಟ್ಟಣದ ತಿಪ್ಪೇಸ್ವಾಮಿ.ಎಂ., ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಹೊಸದುರ್ಗ ತಾಲೂಕು ಮಾವಿನಕಟ್ಟೆ ಗ್ರಾಮದ ಸುನಿಲ್ ಕುಮಾರ್ ಹಾಗೂ ಪಕ್ಷೇತರರಾಗಿ ಹೊಸದುರ್ಗ ತಾಲೂಕು ಗರಗ ಗ್ರಾಮದ ಡಿ.ಪಾಂಡುರಂಗ ಗರಗ, ಬನಸಿಹಳ್ಳಿ ಗ್ರಾಮದ ಎಂ.ಎಸ್.ಸತೀಶ್ ನಾಮಪತ್ರ ಸಲ್ಲಿಸಿದ್ದಾರೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಚಿತ್ರದುರ್ಗ ನಗರದ ಎಂ.ಚಂದ್ರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಹೊಳಲ್ಕೆರೆ ಪಟ್ಟಣದ ಹೆಚ್.ಆಂಜನೇಯ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹೊಳಲ್ಕೆರೆ ಪಟ್ಟಣದ ಡಾ.ಎಲ್.ಜಯಸಿಂಹ ನಾಮಪತ್ರ ಸಲ್ಲಿಸಿದ್ದಾರೆ.