ಚಿತ್ರದುರ್ಗ | ರೋಟರಿ ಕ್ಲಬ್‍ನಿಂದ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.25 : ವೀರ ಸೇನಾನಿ ದೇಶಭಕ್ತ ಭಾರತ ಕಂಡಂತ ಅತ್ಯದ್ಬುತ ರಾಜಕಾರಣಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಎಂದು ಲೇಖಕ ಹೆಚ್.ಆನಂದ್‍ಕುಮಾರ್ ಹೇಳಿದರು.
ರೋಟರಿ ಕ್ಲಬ್‍ನಿಂದ ರೋಟರಿ ಬಾಲಭವನದಲ್ಲಿ ಬುಧವಾರ ನಡೆದ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆ ಉದ್ಗಾಟಿಸಿ ಮಾತನಾಡಿದರು.

ಸಾವಿರಾರು ವರ್ಷಗಳ ಗುಲಾಮಗಿರಿಯಿಂದ ಭಾರತವನ್ನು ರಕ್ಷಿಸುವಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್‍ರವರ ಶ್ರಮ ಅಪಾರ, ಕಟಕ್‍ನಲ್ಲಿರುವ ಅವರ ಮನೆಯಲ್ಲಿ ಸುಭಾಷ್ ಚಂದ್ರಬೋಸ್ ಹುಟ್ಟಿದ ಕೊಠಡಿಗೆ ಹೋಗಿದ್ದೆ. ನನಗೆ ನೀವು ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆಂದು ಭಾರತೀಯರಿಗೆ ಕರೆ ಕೊಟ್ಟಿದ್ದರು ಅಂತಹ ಕೆಚ್ಚೆದೆಯ ನಾಯಕರು ಇಂದು ಸಿಗುವುದು ಕಷ್ಟ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜ್, ಜಂಟಿ ಕಾರ್ಯದರ್ಶಿ ಜಿ.ಎನ್.ವೀರಣ್ಣ, ಎಸ್.ವೀರೇಶ್, ವೀರಭದ್ರಸ್ವಾಮಿ, ವಿಶ್ವನಾಥಬಾಬು, ಡಾ.ತಿಪ್ಪೇಸ್ವಾಮಿ, ಜಯಶ್ರಿಷಾ, ಸೂರ್ಯನಾರಾಯಣ, ಪ್ರೀತಿ ಕನಕರಾಜ್, ನಾಗೇಂದ್ರಬಾಬು ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks