ನೀಟ್‌” ಫಲಿತಾಂಶದಲ್ಲಿ ಆಲ್‌ ಇಂಡಿಯಾ ರ್ಯಾಂಕ್‌  ದಾಖಲಿಸಿದ ಚಿತ್ರದುರ್ಗ “ಎಸ್‌ ಆರ್‌ ಎಸ್” ವಿದ್ಯಾರ್ಥಿಗಳು

1 Min Read

ಚಿತ್ರದುರ್ಗ, (ಸೆ.08) ನಗರದ  ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು 2022ರ ನೀಟ್‌ ಫಲಿತಾಂಶದಲ್ಲಿ ಆಲ್‌ ಇಂಡಿಯಾ  ರ್ಯಾಂಕ್‌ ಗಳೊಂದಿಗೆ ಇತಿಹಾಸ ದಾಖಲಿಸಿದ್ದಾರೆ.

ಸೆಪ್ಟೆಂಬರ್‌-07ರಂದು ಪ್ರಕಟಗೊಂಡ ವೈದ್ಯಕೀಯ ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಕು.ವಿವೇಕ್‌ ಜಿ ವಿ. ಹಾಗೂ , ಕು.ನಮ್ರತಾ ಎಂ. ಎನ್‌, ಕು. ಅರ್ಪಿತಾ ಕೆ. ಎಸ್‌, ಕ್ರಮವಾಗಿ  ಆಲ್‌ ಇಂಡಿಯಾ 1740, 1775 ಹಾಗೂ 3286ನೇ ರ್ಯಾಂಕ್‌ಗಳಿಸುವುದರೊಂದಿಗೆ ರಾಷ್ಟ್ರಮಟ್ಟದ, ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಳಿಸಿ,  ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಾಲೇಜಿನ ಇತರೆ ಅನೇಕ ವಿದ್ಯಾರ್ಥಿಗಳು ನೀಟ್‌ನಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದು ಕು. ಬಸವಚಂದ್ರ ಪಿ. ಎನ್‌, 581, ಕು.ವಿನಯ್‌ ಕೆ. ಎಸ್‌. 576, ಕು.ಪ್ರಣತಿ ಎಂ. ಎಸ್‌. 558, ಕು.ಯಶ್ವಂತ್‌ ಎಂ. 544, ಕು.ಅವಿನಾಶ್‌ ಆರ್‌. 540, ಕು. ವಿನಯ್‌ ಆರ್‌ ವಿ. 540, ಕು.ನವ್ಯ ಟಿ. 536, ಕು.ಸಲ್ಮಾಬಾನು, 532, ಕು.ನಿಖಿತಾ ವಿ.531, ಕು.ಓಂಪ್ರಿಯಾ ಎಸ್‌. 529, ಕು. ಶೆಶಾಂಕ್‌ ಆರ್‌ ಮೊತ್ಕೂರ್‌ 527, ಕು.ಶ್ವೇತಾ ರಮೇಶ್‌, 526, ಕು.ಸಹನ ಕೆ.ಟಿ. 521, ಕು.ಎರಿಸ್ವಾಮಿ. 516. ಕು.ಸಹನಾ ಸಿ.ಕೆ. 507 ಅಂಕಗಳನ್ನು ಪಡೆದು ಮೊದಲ ಸುತ್ತಿನಲ್ಲೇ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದುಕೊಳ್ಳಲು ಅರ್ಹರಾಗಿದ್ದಾರೆ.  ಇವರಲ್ಲದೆ ಇತರೆ 18 ವಿದ್ಯಾರ್ಥಿಗಳು 450 ಕಿಂತ ಅಧಿಕ ಅಂಕಗಳಿಸಿದ್ದು, ಇವರೆಲ್ಲರೂ ವಿವಿಧ ಮೀಸಲಾತಿಗಳಡಿಯಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುತ್ತಾರೆ.  ಇದರೊಂದಿಗೆ ಎಸ್‌ ಆರ್‌ ಎಸ್‌ ಕಾಲೇಜೊಂದರಲ್ಲೇ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಂಬಿಬಿಎಸ್‌ ಸೀಟು, ಇತರೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯುರ್ವೇದ ಹಾಗೂ ಇತರೆ ಭಾರತೀಯ ವೈದ್ಯಕೀಯ ಪದ್ಧತಿಯ ಸೀಟುಗಳನ್ನು ಪಡೆದುಕೊಳ್ಳುತ್ತಾರೆ.

ಈ ಅಮೋಘ ಸಾಧನಗೈದ ವಿದ್ಯಾರ್ಥಿಗಳಿಗೆ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ ಎ ಲಿಂಗಾರೆಡ್ಡಿ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ.ರವಿ ಟಿ. ಎಸ್. ಪ್ರಾಂಶುಪಾಲರದ ಶ್ರೀ ಗಂಗಾಧರ್‌ ಈ. ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಹೃದಯಪೂರ್ವಕ ಆಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *