ಚಿತ್ರದುರ್ಗ | 2026ರ ಜೆಇಇ ಮೇನ್ಸ್ ನಲ್ಲಿ ಐತಿಹಾಸಿಕ ಫಲಿತಾಂಶ ದಾಖಲಿಸಿದ “ಎಸ್‌ ಆರ್‌ ಎಸ್‌” ಪಿಯು ಕಾಲೇಜು”

1 Min Read

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 17 : ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ  ವಿದ್ಯಾರ್ಥಿಗಳು ಇದೇ ಜನವರಿಯಲ್ಲಿ ನಡೆದ “ಜೆಇಇ” ಮೇನ್ಸ್‌ ಮೊದಲ ಸ್ಲಾಟ್‌ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದು ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾರೆ.

ಕು. ಮಿಥುನ್‌ ಎಸ್‌ ಜಿ. ಶೇಕಡ 99.54 ಪರ್ಸಂಟೈಲ್‌ನೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ.  ಕಾಲೇಜಿನ ವಿದ್ಯಾರ್ಥಿಗಳಾದ ಕು.ಸುದರ್ಶನ್‌ ಕೆ ಎಂ., 98.61,  ಕು. ಕೀರ್ತನ್‌ ಬಿ. 98.43, ಪರ್ಸಂಟೈಲ್ ನೊಂದಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಹಾಗೂ ಕು. ಕೆ ಎಸ್‌ ಪ್ರಮೋದ್‌ ಹೆಬ್ಬಾಳ್‌ 98.11, ಕು. ಅಂಜಿನಿ ಕುಮಾರ್‌. 97.08, ಹೀಗೆ ಕಾಲೇಜಿನ ಒಟ್ಟು 27 ವಿದ್ಯಾರ್ಥಿಗಳು ಶೇಕಡ 90ಕ್ಕೂ ಅಧಿಕ ಪರ್ಸಂಟೈಲ್‌ ಪಡೆದುಕೊಂಡು ಐಐಟಿ ನಿರೀಕ್ಷೆಯಲ್ಲಿದ್ದಾರೆ.  58 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಗೆ ಕ್ವಾಲಿಪೈ ಆಗುವುದರ ಮೂಲಕ ಐಐಟಿನಲ್ಲಿ ಸೀಟು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

 

ಅತ್ಯುತ್ತಮ ಸಾಧನೆಗೈದು ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿಂನಂದಿಸಿದ್ದಾರೆ.

Share This Article
Enable Notifications OK No thanks