ಚಿತ್ರದುರ್ಗ : ಶೌಚಾಲಯ ಸ್ವಚ್ಛಗೊಳಿಸಿದ ಸಮಾಜ ಕಲ್ಯಾಣಾಧಿಕಾರಿ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ಅ.03) : ಗಾಂಧಿ ಜಯಂತಿ ಅಂಗವಾಗಿ ಚಿತ್ರದುರ್ಗ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಅವರು ನಗರದ ಸರ್ಕಾರಿ ಕಲಾ ಕಾಲೇಜು ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಎಲ್ಲ ಶೌಚಾಲಯಗಳನ್ನು ಖುದ್ದಾಗಿ ತಾವೇ ಸ್ವಚ್ಛಗೊಳಿಸಿದರು.

ಸರ್ಕಾರಿ ಕಲಾ ಕಾಲೇಜಿನ ವಸತಿ ನಿಲಯಕ್ಕೆ ಭೇಟಿ ನೀಡಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ ಅವರು  ಗಾಂಧೀಜಿ ಆಶಯದಂತೆ  ಶೌಚಾಲಯಗಳನ್ನು ತಾವೇ ಸ್ವತಃ ಸ್ವಚ್ಚ ಗೊಳಿಸಿದರು.

ಪ್ರತಿ ತಿಂಗಳ ಎರಡನೇ ಶನಿವಾರವನ್ನು “ಸ್ವಚ್ಛತಾ ಶನಿವಾರ” ಎಂಬ ಅಭಿಯಾನದೊಂದಿಗೆ  ಸಮಾಜ ಕಲ್ಯಾಣ ಅಧಿಕಾರಿಗಳ ಆಶ್ರಯದಲ್ಲಿ  ನಡೆಯುತ್ತಿರುವ  ಎಲ್ಲಾ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಕೊಠಡಿ,  ಶೌಚಾಲಯ, ಸ್ನಾನದ ಗೃಹಗಳನ್ನು ಸ್ವಚ್ಛಗೊಳಿಸುವ ಪ್ರತಿಜ್ಞಾವಿಧಿಯನ್ನು  ಎಲ್ಲರಿಗೂ ಬೋಧಿಸಲಾಯಿತು. ಇದಲ್ಲದೆ ಹಾಸ್ಟೇಲ್ ಆವರಣದಲ್ಲಿ  ಶ್ರಮದಾನ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *