ಚಿತ್ರದುರ್ಗ : ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 17ರಿಂದ 19 ರವರೆಗೆ ಪ್ರತೀದಿನ ಸಂಜೆ 6-30 ಗಂಟೆಗೆ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ -2022 ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮಾರ್ಚ್ 17ರಂದು ಸಂಜೆ 6-30 ಗಂಟೆಗೆ ಚಂದ್ರಶೇಖರ ತಾಳ್ಯ ವಿರಚಿತ ಒಕ್ಕಲಿಗರ ಮುದ್ದಣ್ಣ ನಾಟಕವು ಛಾಯಾಭಾರ್ಗವಿ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಅಭಿನಯಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ಸಂಶೋಧಕ ಪ್ರೊ.ಶ್ರೀಶೈಲ ಆರಾಧ್ಯ ಹಾಗೂ ಸಾಹಿತಿ ಚಂದ್ರಶೇಖರ ತಾಳ್ಯ ಇವರನ್ನು ಸನ್ಮಾನಿಸಲಾಗುವುದು.
ಮಾರ್ಚ್ 18ರಂದು ಸಂಜೆ 6-30 ಗಂಟೆಗೆ ಲಿಂಗದೇವರು ಹಳೆಮನೆ ರಚಿಸಿದ ಗಡಿಯಂಕ ಕುಡಿಮುದ್ದ ನಾಟಕವು ಆರ್.ಜಗದೀಶ್ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಅಭಿನಯಿಸುವರು ಹಾಗೂ ಹೆಚ್.ಎಸ್.ದ್ಯಾಮೇಶ್ ವಿರಚಿತ ವಸುಂಧರೆ ನಾಟಕವು ವೈ.ಡಿಬದಾಮಿ ನಿರ್ದೇಶನದಲ್ಲಿ ಮಂಜುಳ ಬದಾಮಿ ಅಭಿನಯಿಸುವರು.
ಇದೇ ಸಂದರ್ಭದಲ್ಲಿ ಮಂಜುಳ ವೈ.ಡಿ.ಬದಾಮಿ ದಂಪತಿಗಳನ್ನು ಸನ್ಮಾನಿಸಲಾಗುವುದು.
ಮಾರ್ಚ್ 19ರಂದು ಸಂಜೆ 6-30 ಗಂಟೆಗೆ ಬಿ.ಆರ್.ಅರಷಿನಗೋಡಿ ರಚಿಸಿದ ಬಸ್ ಕಂಡಕ್ಟರ್ ನಾಟಕವು ವೈ.ಡಿಬದಾಮಿ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಅಭಿನಯಿಸುವರು.
ಇದೇ ಸಂದರ್ಭದಲ್ಲಿ ಗಾನಯೋಗಿ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ತೋಟಪ್ಪ ಉತ್ತಂಗಿ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಮೂರೂ ದಿನ ನಡೆಯುವ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ -2022 ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿ ಎಂದು ರಂಗನಿರ್ದೇಶಕ ಕೆ.ಪಿ.ಎಮ್.ಗಣೇಶಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.