ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಡಿ. 28 : ನಗರದ ದೊಡ್ಡಪೇಟೆಯ ಜೈನ್ ದೇವಾಲಯದ ಹಿಂಭಾಗದ ಜವಳೇರ ಬೀದಿಯಲ್ಲಿನ ಬಂಡೆಯಲ್ಲಿ ನೆಲಸಿರುವ ಶ್ರೀ ಚೌಡೇಶ್ವರಿ ಅಮ್ಮನವರ ಕಡೇ ಕಾರ್ತಿಕ, ದೀಪಾರಾಧನೆ ಕಾರ್ಯಕ್ರಮವೂ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಸಲಾಯಿತು.
ರಾಜರ ಕಾಲದಿಂದಲೂ ಇಲ್ಲಿನ ಚೌಡೇಶ್ವರಿ ಅಮ್ಮನವರನ್ನು ಪೂಜೆ ಮಾಡಿಕೊಂಡು ಬರಲಾಗುತ್ತಿದೆ, ತದ ನಂತರ ಜವಳೇರ ಬೀದಿಯಲ್ಲಿನ ಭಕ್ತಾಧಿಗಳು ಸೇರಿಕೊಂಡು ಅಮ್ಮನವರ ಆರಾಧನೆಯನ್ನು ಮಾಡಲಾ ರಂಭಿಸಿದರು. ಇದರಿಂದ ಇಲ್ಲಿನ ಚೌಡೇಶ್ವರಿ ಅಮ್ಮನವರಿಗೆ ಪ್ರತಿ ದಿನ ಪೂಜೆಯನ್ನು ಮಾಡುವುದರ ಮೂಲಕ ಆರಾಧನೆಯನ್ನು ಮಾಡಲಾಗುತ್ತಿದೆ, ಇದರಂತೆ ಪ್ರತಿ ವರ್ಷವೂ ಸಹಾ ಡಿಸೆಂಬರ್ ಮಾಹೆಯಲ್ಲಿ ಚೌಡೇಶ್ವರಿ ಅಮ್ಮನವರಿಗೆ ಕಾರ್ತಿಕ ಮಹೋತ್ವವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅಂದು ಸಂಜೆ ಅಮ್ಮನವರಿಗೆ ಕಡೇ ಕಾರ್ತಿಕ, ದೀಪರಾಧನೆ ಅಂಗವಾಗಿ ಅಮ್ಮನವರಿಗೆ ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು, ಇದ್ದಲ್ಲದೆ ದೇವಾಲಯ ಪೂರ್ತಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತು. ಸಂಜೆಯಿಂದಲೇ ಚೌಡೇಶ್ವರಿ ಅಮ್ಮನವರಿಗೆ ಅಲಂಕಾರವನ್ನು ಮಾಡಲಾಗಿದ್ದು, ಸಂಜೆ 8 ಗಂಟೆಗೆ ಮಹಾ ಮಂಗಳರಾತಿಯನ್ನು ನೇರವೇರಿಸಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳು ಪೂಜೆಯನ್ನು ಮಾಡಿಸುವುದರ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾದರು.
ಶ್ರೀ ಚೌಡೇಶ್ವರಿ ದೇವಸ್ಥಾನಅಭೀವೃದ್ದಿಸೇವಾಸಮಿತಿವತಿಯಿಂದ ಕಾರ್ತಿಕ, ದೀಪಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.