ಚಿತ್ರದುರ್ಗ,(ಜೂನ್. 29) : ಚಿತ್ರದುರ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿ ಕರ್ತವ್ಯ ನಿರ್ವಹಿಸಿದ ಜೆ.ಮಂಜೇಗೌಡ ಅವರು ಚಿಕ್ಕಮಗಳೂರಿಗೆ ವರ್ಗಾವಣೆ ಹೊಂದಿದ ಹಿನ್ನಲೆಯಲ್ಲಿ ಬುಧವಾರ ವಾರ್ತಾಭವನದಲ್ಲಿ ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೆ.ಮಂಜೇಗೌಡ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಸದಾ ಸ್ಮರಣೀಯವಾಗಿರುತ್ತಿದೆ. ಇಲಾಖೆಯ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟದೊಂದಿಗೆ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಕಚೇರಿಗೆ ನೂತನ ವಾರ್ತಾಧಿಕಾರಿಯಾಗಿ ಆಗಮಿಸಿದ ಬಿ.ವಿ.ತುಕಾರಾಂರಾವ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿಗಳಾದ ಜಿ.ವೆಂಕಟೇಶ್, ವೇಣುಗೋಪಾಲ.ಪಿ.ಎಂ., ಎಸ್.ಚಂದ್ರಶೇಖರ್, ತಿಮ್ಮಶೆಟ್ಟಿ, ಎಂ.ಜೆ.ಬೋರೇಶ, ಅಂಜಿನಮೂರ್ತಿ, ತರಬೇತಾರ್ಥಿಗಳಾದ ಆನಂದಪ್ಪ, ಲಕ್ಷ್ಮೀಪತಿ, ನಾಗವೇಣಿ. ಎಸ್ ಸೇರಿದಂತೆ ಮತ್ತಿತರರು ಇದ್ದರು.