ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜು. 20 : ಕನ್ನಡ ರಂಗಭೂಮಿ ಹಾಗೂ ಸಂಗೀತ ಕ್ಷೇತ್ರಕ್ಕೆ ನಾಲ್ಕು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಶ್ರೀಗುರು ವಾದ್ಯವೃಂದ ದಾವಣಗೆರೆ, ಮತ್ತು ಕನ್ನಡ ಕಲಾವಿದರ ಸಂಘ, ಬೆಳಗಾವಿ ಹಾಗೂ ಶ್ರೀ ಸಂಚಾರಿ ಕೆ.ಬಿ.ಆರ್. ಡ್ರಾಮಾ ಕಂಪನಿ ದಾವಣಗೆರೆ ಇವರ ಸಹಯೋಗದೊಂದಿಗೆ ನಗರದಲ್ಲಿ ಜು.23 ರ ಮಂಗಳವಾರ ಸಂಜೆ 06ಕ್ಕೆ ಚಿತ್ರದುರ್ಗದ ತರಾಸು. ರಂಗಮಂದಿರದಲ್ಲಿ “ಸಾದ್ವಿ ಸರಸ್ವತಿ” ನಾಟಕ ಪ್ರದರ್ಶನ ಏರ್ಪಡಿಸಿದೆ.
ಈ ಸಮಾರಂಭದ ಸಾನಿಧ್ಯವನ್ನು ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿಯ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಶಾಸಕರಾದ ಕೆ.ಸಿ. ವೀರೇಂದ್ರ (ಪಪ್ಪಿ) ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ವಹಿಸಲಿದ್ದಾರೆ.
ಚಿತ್ರದುರ್ಗದ ತಹಶೀಲ್ದಾರರಾದ ಶ್ರೀಮತಿ ಡಾ. ನಾಗವೇಣಿ, ಹೊಳಲ್ಕೆರೆ ತಹಶೀಲ್ದಾರರಾದ ಶ್ರೀಮತಿ ಬಿ.ಬಿ. ಫಾತಿಮಾ, ಹಿರಿಯೂರಿನ ಪೋಲೀಸ್ ಉಪಅಧೀಕ್ಷಕರಾದ ಶ್ರೀಮತಿ ಚೈತ್ರಾ ಎಸ್. ನಗರಸಭೆ ಆಯುಕ್ತರಾದ ಶ್ರೀಮತಿ ಎಂ. ರೇಣುಕಾ, ಕೆ.ಡಿ.ಪಿ. ಸದಸ್ಯರಾದ ಕೆ.ಸಿ. ನಾಗರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ ಗೌಡಗೆರೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹೆಚ್. ಹನುಮಂತಪ್ಪ, ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ರವೀಂದ್ರ ಎಸ್.ಪಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಆರ್.ಟಿ.ಓ. ಭರತ್ ಎಮ್. ಕಾಳಸಿಂಗೆ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಡಿ.ಓ ಮುರಾರ್ಜಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಲಾವಿದರಾದ ಚಿಂದೋಡಿ ಶಂಭುಲಿಂಗಪ್ಪ ಶ್ರೀ ಸಂಚಾರಿ ಕೆ.ಬಿ.ಆರ್. ಡ್ರಾಮಾ ಕಂಪನಿಯ ಮಾಲೀಕರಾದ ಚಿಂದೋಡಿ ಶಂಭುಲಿಂಗಪ್ಪ ಆಗಮಿಸಲಿದ್ದಾರೆ.
ಸಮಾರಂಭದಲ್ಲಿ ಬೆಳಗಾವಿಯ ಕನ್ನಡ ಕಲಾವಿದರ ಸಂಘದ ಅಧ್ಯಕ್ಷರಾದ ಬಿ.ಕೆ. ಗಣೇಶ್‌ರನ್ನು ಸನ್ಮಾನಿಸಲಾಗುವುದು.ಈ ಸಮಾರಂಭದ ಅಂಗವಾಗಿ ಕರ್ನಾಟಕದ ಶ್ರೇಷ್ಠ ಕಲಾವಿದರಿಂದ “ಸಾದ್ವಿ ಸರಸ್ವತಿ” ನಾಟಕ ಪ್ರದರ್ಶನ ಅಬಿನಯಿಸಲಿದ್ದಾರೆ.