ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ : ಮೂವರು ದರೋಡೆಕೋರರ ಬಂಧನ, ನಗದು ಮತ್ತು ವಾಹನ ವಶ

2 Min Read

ಚಿತ್ರದುರ್ಗ, (ಜ.04) : ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ ವಾಹನ ಮೊಬೈಲ್ ಮತ್ತು ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಜನವರಿ 02 ರಂದು ಮದಕರಿಪುರ ಗ್ರಾಮದ ಬಳಿ ಇರುವ ರಿಂಗ್‌ ರೋಡ್ ಅಂಡರ್ ಪಾಸ್ ಬಳಿ ನಡೆದಿದ್ದ ಹಲ್ಲೆ ಮತ್ತು ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಾರ್ಯಾಚರಣೆ ನಡೆಸಿದ್ದಾರೆ.

ದಾವಣಗೆರೆ ಮೂಲಕ ಸಂತೋಷ, ಪೋರ್ ನಾಯ್ಕ್ ಮತ್ತು ಅಂಕಿತ್ ಮೂವರು ಆರೋಪಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಪ್ರಕರಣದ ಹಿನ್ನೆಲೆ : ದಿನಾಂಕ: 02.01.2023 ರಂದು ಬೆಳಿಗ್ಗೆ 4.30 ಗಂಟೆ ಸಮಯದಲ್ಲಿ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಚಾಲಕ ಸಂತೋಷ್ ಚಿತ್ರದುರ್ಗದ ಸಮೀಪ ಮದಕರಿಪುರ ಗ್ರಾಮದ ಬಳಿ ರಿಂಗ್ ರೋಡ್ ಅಂಡರ್ ಪಾಸ್ ಬಳಿ ಬರುತ್ತಿರುವಾಗ ಬರ್ಹಿದೆಸೆಗೆ ರಸ್ತೆಯ ಪಕ್ಕದಲ್ಲಿ ಹೋಗಿದ್ದು, ರಾಂಪ್ರಕಾಸ್ ತಿವಾರಿ ರವರು ವಾಹನದಲ್ಲೇ ಕುಳಿತುಕೊಂಡಿರುವಾಗ ಇದ್ದಕ್ಕಿದ್ದಂತೆ ಯಾರೋ ಮೂರು ಜನರು ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ಲಿನಲ್ಲಿ ಏಕಾಎಕಿ ಬಂದು ವಾಹನದ ಡೋರ್ ತೆಗೆದು ರಾಂಪ್ರಕಾಸ್ ತಿವಾರಿ
ಮೈ ಕೈಗೆ ಹೊಡೆದು ವಾಹನದ ಕೀ ತೆಗೆದುಕೊಂಡು ವಾಹನದ ಡ್ಯಾಶ್ ಬೋರ್ಡಿನಲ್ಲಿದ್ದ 2,00,000/- ರೂಪಾಯಿ ಹಣವನ್ನು ಬಲವಂತವಾಗಿ ತೆಗೆದುಕೊಂಡು ಪರಾರಿಯಾಗಿರುತ್ತಾರೆ.

ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ದೂರಿನ ಮೇರೆಗೆ
ಆರೋಪಿಗಳನ್ನು ಪತ್ತೆ ಮಾಡಲು ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಕೆ.ಪರುಶುರಾಮ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಜೆ.ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಾಲಚಂದ್ರ ನಾಯಕ್ ನೇತೃತ್ವದಲ್ಲಿ ಪಿ.ಎಸ್.ಐ.ಶಿವಕುಮಾರ್ ಸಿಬ್ಬಂದಿಗಳಾದ ರಂಗನಾಥ್ ಕುಮಾರ್,  ಅವಿನಾಶ್, ಹಿದಾಯತ್, ತಿಪ್ಪೇಸ್ವಾಮಿ, ರಾಜು ಮುಡಬಾಗಿಲು ಹಾಗೂ ಪ್ರದೀಪ್ ರವರನ್ನು ಒಳಗೊಂಡ ವಿಶೇಷ ತಂಡ ರಚನೆ ಮಾಡಿದ್ದು ಈ ತಂಡವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ಸುಲಿಗೆ ಮಾಡಿದ ಹಣದ ಪೈಕಿ 67,500 ರೂಪಾಯಿ ನಗದು ಹಣ, 4,00,000 ಮೌಲ್ಯದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಮತ್ತು 03 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಈ ಕಾರ್ಯಾಚರಣೆಯನ್ನು ಎಸ್.ಪಿ. ಪರುಶುರಾಮ ಅವರು ಶ್ಲಾಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *