ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 21 : ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಹೆಚ್.ನಾಯ್ಕ (88 ವರ್ಷ) ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಪುಟ್ಟು ಬಾಯಿ ನಾಯ್ಕ ಅವರು ಒಮ್ಮೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರೆ, ಪುತ್ರ ಸುನಿಲ್ ಚಿತ್ರದುರ್ಗ ನಗರಸಭೆಯ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇಬ್ಬರೂ ಪುತ್ರಿಯರು ಅಮೇರಿಕಾದಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದು, ಅಲ್ಲಿಯೇ ನೆಲೆಸಿದ್ದಾರೆ. ಮಾ.24ರ ಸೋಮವಾರ ಮದ್ಯಾಹ್ನ ಹುಟ್ಟೂರು ಸಿರಿಗೆರೆ ಬಳಿಯ ದೊಡ್ಡಿಗನಾಳ್ ಹೊಸಹಟ್ಟಿಯಲ್ಲಿ ಮದ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಚಿತ್ರದುರ್ಗದ ಪಿಎನ್‍ಟಿ ಕ್ವಾಟರ್ಸ್ ಬಳಿಯಲ್ಲಿರುವ ನಿವಾಸದ ಬಳಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಮೇರಿಕಾದಲ್ಲಿ ನೆಲೆಸಿರುವ ಅವರ ಪುತ್ರಿಯರು ಮತ್ತು ಇತರೆ ಸದಸ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವರು.

