ಚಿತ್ರದುರ್ಗ : ನಗರದ ಮೆದೇಹಳ್ಳಿ ರಸ್ತೆಯ ಮರುಳಪ್ಪ ಬಡಾವಣೆಯ ನಿವಾಸಿ ಡಿ.ಪಿ.ರತ್ನಮ್ಮ (82) ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.

ಮೃತರಿಗೆ ವಿಜಯವಾಣಿ ವಿಶೇಷ ವರದಿಗಾರ ಡಿ.ಪಿ. ನಾಗರಾಜ್ ಶ್ರೇಷ್ಠಿ ಸೇರಿ ಮೂವರು ಪುತ್ರರು ಇದ್ದಾರೆ.

ಮಧ್ಯಾಹ್ನ 3ರ ನಂತರ ಮೆದೇಹಳ್ಳಿ ರಸ್ತೆಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವೀರಶೈವ ರುದ್ರಭೂಮಿಯಲ್ಲಿ ಸಂಜೆ 5 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

