Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಬಿಜೆಪಿ ಕಚೇರಿಯಲ್ಲಿ ರಾಜವೀರ ಮದಕರಿನಾಯಕರ ಜಯಂತಿ ಆಚರಣೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 13 : ಶತ್ರುಗಳನ್ನು ಸದೆಬಡಿದು ಗಂಡುಮೆಟ್ಟಿನ ನಾಡು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಎಲ್ಲರ ಪ್ರಾಣ ಮಾನ ಕಾಪಾಡಿದ ರಾಜಾವೀರ ಮದಕರಿನಾಯಕನನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ರಾಜವೀರ ಮದಕರಿನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜವೀರ ಮದಕರಿ ನಾಯಕ ವಂಶಸ್ಥರು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಶ್ರೀಶೈಲಾದ ಬಳಿಯ ಜಡಿಕಲ್ಲು ಗುಡ್ಡದಿಂದ ಬಂದು ವಿಜಯನಗರ ರಾಜರ ಬಳಿ ಆಶ್ರಯ ಪಡೆದು ತದ ನಂತರ ಅವರಿಂದ ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳನ್ನು ಬಳುವಳಿಯಾಗಿ ಪಡೆದು ತಮ್ಮ ರಾಜ್ಯವನ್ನು ಸ್ಥಾಪನೆ ಮಾಡಿದರು. ತದ ನಂತರ ಹೊಸದುರ್ಗ ತಾಲ್ಲೂಕಿನ ಜಾನಕಲ್ಲು ಬಳಿ ಬಂದು ಆಶ್ರಯವನ್ನು ಪಡೆದರು. ತಮ್ಮ ಆಧಿಕಾರ ಅವಧಿಯಲ್ಲಿ ಉತ್ತಮವಾದ ಆಡಳಿತವನ್ನು ಜನರಿಗೆ ನೀಡಿದರು ಇದ್ದಲ್ಲದೆ ಉತ್ತಮವಾದ ನೀರಿನ ವ್ಯವಸ್ಥೆಯನ್ನು ಮಾಡುವುದರ ಮೂಲಕ ಜನರಿಗೆ ನೀರಿನ ತೊಂದರೆ ಇಲ್ಲದಂತೆ ಮಾಡಿದ್ದರು ಇದ್ದಲ್ಲದೆ ಜಿಲ್ಲೆಯಲ್ಲಿ ಉತ್ತಮವಾದ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡುವುದರ ಮೂಲಕ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಿದರು ಅದನ್ನು ಈಗಲೂ ಸಹಾ ನೋಡಬಹುದಾಗಿದೆ ಎಂದರು.

ಒಮ್ಮೆ ಆನೆ ಮದವನ್ನು ಏರಿತ್ತು ಇದನ್ನು ಕಂಡ ಅಗಿನ ರಾಜರಾದ ಇವರು ಅದನ್ನು ಹಿಡಿದು ಪಳಗಿಸಿ ತಹ ಬದಿಗೆ ತಂದರು. ಇದನ್ನು ಕಂಡ ಶೃಂಗೇರಿಯ ಶ್ರೀಗಳು ಇವರಿಗೆ ಮದಕರಿ ಎಂದು ಬಿರುದನ್ನು ನೀಡಿದರು. ಆಗಿನಿಂದ ಇವರ ಹೆಸರಿನಲ್ಲ್ಲಿ ಮದಕರಿ ಸೇರಿತು. ಇವರಿಗೆ 12 ವರ್ಷದಲ್ಲಿ ಪಟ್ಟವನ್ನು ಕಟ್ಟಲಾಯಿತು.

ಸಂಘ ಪರಿವಾರದ ಸಾಮರಸ್ಯ ಸಂಘಟಕರಾದ ವಾದಿರಾಜ್ ಜಿ ಮದಕರಿನಾಯಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್. ರಾಜ್ಯ ಕಾರ್ಯಕಾರಣಿ ಮಾಜಿ ಸದಸ್ಯರಾದ ಪಾಪೇಶ್ ನಾಯಕ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾಳೇಕಾಯಿ ರಾಮ್‍ದಾಸ, ಸಂಪತ್ ಕುಮಾರ್. ಚಳ್ಳಕೆರೆ ಕ್ಷೇತ್ರ ಮುಖಂಡರಾದ ಕೆ ಟಿ ಕುಮಾರಸ್ವಾಮಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕವನ. ನಿಕಟಪೂರ್ವ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಯಾದ ಮಂಜುನಾಥ್. ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಕಲ್ಲೇಶಯ್ಯ ಚಿತ್ರ ನಾಯಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಕೂಲಿಕಾರ್ ಯುವ ಮುಖಂಡರಾದ ಸೋಮು ರೈತ ಮಾರುತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಮ್ಮನಹಳ್ಳಿ ನಾಗರಾಜ್. ಬೋಸೆರಂಗಸ್ವಾಮಿ. ಎಸ್ಟಿ ಮೋರ್ಚಾ ಗ್ರಾಮಾಂತರ& ನಾಯಕನಹಟ್ಟಿ ಮಂಡಲ ಅಧ್ಯಕ್ಷರಾದ ಶಿವಪ್ರಸಾದ್ ಪಾರ್ವತಯ್ಯ. ಸೇರಿದಂತೆ ವಿವಿಧ ಹಂತದ ಪದಾಧಿಕಾರಿಗಳು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರೈತರ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಸಿಯಲು ಬಿಡುವುದಿಲ್ಲ : ಬಗಡಲಪುರ ನಾಗೇಂದ್ರ ಎಚ್ಚರಿಕೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಸರ್ಕಾರ ಕಸಿಯಲು ಬಿಡುವುದಿಲ್ಲ. ಯಾವುದೇ

ಕನ್ನಡಕ್ಕಾಗಿ ಹೋರಾಡಿದವರನ್ನು ನೆನೆಯುವುದು ಎಲ್ಲರ ಕರ್ತವ್ಯ : ತಾರಿಣಿ ಶುಭದಾಯಿನಿ

    ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ಭಾಷೆ ಎಂದರೆ ಸಂಸ್ಕøತಿಯ ಪ್ರತೀಕ. ಭಾಷೆಯನ್ನು ಕಳೆದುಕೊಂಡರೆ ಸಂಸ್ಕøತಿಯನ್ನು ಕಳೆದುಕೊಂಡಂತೆ

ಹಿರಿಯೂರು | ತಾಲ್ಲೂಕಿನ ಈ ಊರುಗಳಲ್ಲಿ ನವೆಂಬರ್ 22 ರಂದು ವಿದ್ಯುತ್ ವ್ಯತ್ಯಯ

  ಚಿತ್ರದುರ್ಗ. ನ.21:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವ್ಯಾಪ್ತಿಯ ಹಿರಿಯೂರು ತಾಲ್ಲೂಕಿನ 220 ಕೆ.ವಿ ಎಸ್.ಆರ್.ಎಸ್ ಹಿಂಡಸಕಟ್ಟೆ ಮತ್ತು ಭಜರಂಗಿ 66/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ

error: Content is protected !!