ಚಿತ್ರದುರ್ಗ, (ನವೆಂಬರ್. 17) : ಜಿಲ್ಲೆಯಲ್ಲಿ ನವೆಂಬರ್ 17ರಂದು ಬಿದ್ದ ಮಳೆಯ ವಿವರದನ್ವಯ ಚಳ್ಳಕೆರೆ ತಾಲ್ಲೂಕಿನ ಡಿ.ಮರಿಕುಂಟೆಯಲ್ಲಿ 43.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ 20, ಪರಶುರಾಂಪುರ 10.2, ನಾಯಕನಹಟ್ಟಿ 14.8, ತಳಕು 19.4 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮುರು 13, ರಾಯಾಪುರ 16.3, ಬಿ.ಜಿ.ಕೆರೆ 31.2 ಮಿ.ಮೀ, ರಾಂಪುರ 6.1 ಹಾಗೂ ದೇವಸಮುದ್ರದಲ್ಲಿ 5.4 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರು 36.4, ಬಬ್ಬೂರು 28, ಇಕ್ಕನೂರು 10.4, ಈಶ್ವರಗೆರೆ 8.8 ಹಾಗೂ ಸೂಗೂರಿನಲ್ಲಿ 35.2 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 6.4, ರಾಮಗಿರಿ 8.2, ಚಿಕ್ಕಜಾಜೂರು 8.2, ಬಿ.ದುರ್ಗ 12.2, ಹೆಚ್.ಡಿ.ಪುರ 3.2, ತಾಳ್ಯ 4.2 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 8.4, ಬಾಗೂರು 20, ಮತ್ತೋಡು 22.4, ಶ್ರೀರಾಂಪುರ 30, ಮಾಡದಕೆರೆ 37 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 38.2, ಚಿತ್ರದುರ್ಗ-2ರಲ್ಲಿ 29.5, ಹಿರೇಗುಂಟನೂರು 1, ಭರಮಸಾಗರ 13, ಸಿರಿಗೆರೆ 7.6, ತುರುವನೂರು 18.2 ಹಾಗೂ ಐನಹಳ್ಳಿಯಲ್ಲಿ 19.8 ಮಿ.ಮೀ ಮಳೆಯಾಗಿದೆ.
41 ಮನೆ ಭಾಗಶಃ ಹಾನಿ: ಮಂಗಳವಾರ ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ 41 ಮನೆ ಭಾಗಶಃ ಹಾನಿ, 40 ಕುರಿ ಹಾನಿ, 2 ಎಕರೆ ಭತ್ತ ಬೆಳೆ ಹಾಗೂ 2 ಎಕರೆ ರಾಗಿ ಬೆಳೆ ಹಾನಿಯಾಗಿದೆ.
ತಾಲ್ಲೂಕುವಾರು ಮಳೆಹಾನಿ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ.
ಚಳ್ಳಕೆರೆ ತಾಲ್ಲೂಕಿನಲ್ಲಿ 7 ಮನೆ ಭಾಗಶಃ ಹಾನಿ, 7 ಕುರಿಗಳಿಗೆ ಸಿಡಿಲು ಬಡಿತವಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ 14 ಮನೆ ಭಾಗಶಃ ಹಾನಿ ಹಾಗೂ ಎರಡು ಎಕರೆ ಭತ್ತ ಹಾನಿಯಾಗಿದೆ.
ಹೊಸದುರ್ಗ ತಾಲ್ಲೂಕಿನಲ್ಲಿ 16 ಮನೆ ಭಾಗಶಃ ಹಾನಿ, 10 ಕುರಿಗಳು ನೀರಿನಲ್ಲಿ ಮುಳುಗಿವೆ. 23 ಕುರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಎರಡು ಎಕರೆ ರಾಗಿ ಬೆಳೆ ಹಾನಿಯಾಗಿದೆ.
ಹೊಳಲ್ಕೆರೆ ತಾಲ್ಲೂಕು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಯಾವುದೇ ಮಳೆಹಾನಿ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.