Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಜಿಲ್ಲೆಯಲ್ಲಿ ಜುಲೈ 24 ರಂದು ಸುರಿದ ಮಳೆ ವಿವರ : ಹೆಚ್‍ಡಿ ಪುರದಲ್ಲಿಯೇ  ಹೆಚ್ಚು ಮಳೆ

Facebook
Twitter
Telegram
WhatsApp

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ.25) : ಸೋಮವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೆಚ್‍ಡಿ ಪುರದಲ್ಲಿ 30.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 12.2 ಮಿ.ಮೀ, ಚಿಕ್ಕಜಾಜೂರು 8.2 ಮಿ.ಮೀ, ಬಿ. ದುರ್ಗ 6.2 ಮಿ.ಮೀ, ತಾಳ್ಯ 6.2 ಮಿ.ಮೀ, ರಾಮಗಿರಿ 6.4 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 11.6 ಮಿ.ಮೀ, ಬಾಗೂರು 18 ಮಿ.ಮೀ, ಮತ್ತೋಡು 13.4 ಮಿ.ಮೀ, ಶ್ರೀರಾಂಪುರ 2.1 ಮಿ.ಮೀ, ಮಾಡದಕೆರೆ 14.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 6 ಮಿ.ಮೀ, ಚಿತ್ರದುರ್ಗ-2ರಲ್ಲಿ 10 ಮಿ.ಮೀ,  ಐನಹಳ್ಳಿ 4.8 ಮಿ.ಮೀ, ಭರಮಸಾಗರ 5 ಮಿ.ಮೀ, ತುರುವನೂರು 5.8 ಮಿ.ಮೀ, ಸಿರಿಗೆರೆ 6 ಮಿ.ಮೀ, ಹಿರೇಗುಂಟನೂರು 2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 7.2 ಮಿ.ಮೀ, ಇಕ್ಕನೂರು 5.8 ಮಿ.ಮೀ, ಈಶ್ವರಗೆರೆ 19.4 ಮಿ.ಮೀ, ಬಾಬೂರು 7 ಮಿ.ಮೀ, ಸುಗೂರು 2.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 5.6 ಮಿ.ಮೀ, ಪರುಶುರಾಂಪುರ 22.4 ಮಿ.ಮೀ, ನಾಯಕನಹಟ್ಟಿ 10.8 ಮಿ.ಮೀ, ತಳಕು 14.2 ಮಿ.ಮೀ, ಡಿ. ಮರಿಕುಂಟೆ 7.3 ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರುನಲ್ಲಿ 4.8 ಮಿ.ಮೀ, ರಾಯಾಪುರ 7 ಮಿ.ಮೀ, ಬಿಜಿಕೆರೆ 12.4 ಮಿ.ಮೀ, ರಾಂಪುರ 3 ಮಿ.ಮೀ, ದೇವಸಮುದ್ರ 5 ಮಿ.ಮೀ ಮಳೆಯಾಗಿದೆ.

12 ಮನೆಗಳು ಭಾಗಶಃ ಹಾನಿ: ಸೋಮವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ  ಒಟ್ಟು 12 ಮನೆಗಳು ಭಾಗಶಃ ಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 7 ಮನೆಗಳು ಭಾಗಶಃ  ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 4 ಮನೆ ಭಾಗಶಃ ಹಾನಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸ್ಥಳೀಯರಿಗೆ ಕೆಲಸ ಕೊಡುವಂತೆ ಒತ್ತಾಯಿಸಿ ಜುಲೈ 24 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಸಿರಿಗೆರೆಯ ತಣಿಗೆಹಳ್ಳಿ ಸಮೀಪ ಡಿ.ಮದಕರಿಪುರದ ಹತ್ತಿರವಿರುವ ಗಣಿಬಾಧಿತ ಪ್ರದೇಶಗಳ ಜನ ಶನಿವಾರದಿಂದ

ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ದೊಡ್ಡ ಕನಸು ಕಾಣಬೇಕು : ಐ.ಎ.ಎಸ್. ಸಾಧಕಿ ಕುಮಾರಿ ಸೌಭಾಗ್ಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜುಲೈ. 21 :  ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಓದಿನಿಂದ ಮಾತ್ರ ಜ್ಞಾನ ವೃದ್ದಿಯಾಗಲಿದೆ ಎಂದು

ನೀಲಮ್ಮ ನಿಧನ

  ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯನವರ ತಾಯಿ ಶ್ರೀಮತಿ ನೀಲಮ್ಮ(89) ಶನಿವಾರ ಮಧ್ಯರಾತ್ರಿ ಗುತ್ತಿನಾಡು ಗ್ರಾಮದಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ

error: Content is protected !!