ಚಿತ್ರದುರ್ಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ | ಜಿಲ್ಲಾಧ್ಯಕ್ಷರಾಗಿ ಜಿ.ಬಿ.ಮಹಂತೇಶ್, ಉಪಾಧ್ಯಕ್ಷರಾಗಿ ರಮೇಶ್ ನಾಯ್ಕ ಆಯ್ಕೆ

1 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 06 : ಗುಣಮಟ್ಟದ ಶಿಕ್ಷಣಕ್ಕಾಗಿ ಎಲ್ಲಾ ಶಿಕ್ಷಕರು ಶ್ರಮಿಸಬೇಕು, ಜಿಲ್ಲೆಯ ಶಿಕ್ಷಕರ ಸಮಸ್ಯೆಗಳ ಬಗ್ಗೆ ಇಲಾಖೆಯ ಸಹಕಾರದೊಂದಿಗೆ ಸ್ಪಂದಿಸುವುದರೊಂದಿಗೆ ಪ್ರತಿ ಶಾಲಾ ಶಿಕ್ಷಕರ ಭೌದ್ದಿಕ ಮಟ್ಟ ಹೆಚ್ಚಳಕ್ಕೆ ನಮ್ಮ ಸಂಘವು ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಬಿ.ಮಹಂತೇಶ್ ಭರವಸೆ ನೀಡಿದರು.

ನಗರದ ತರಾಸು ರಂಗಮಂದಿರಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರಾದ ನಾವು ಹೇಳಿಕೊಟ್ಟ ಶಿಕ್ಷಣವೇ ಮುಖ್ಯ ಅದರಿಂದ ಮುಂದೆ ನಮ್ಮ ಮಕ್ಕಳು ಉನ್ನತ ಶಿಕ್ಷಣದಲ್ಲಿ  ಉತ್ತಮ ಶ್ರೇಣಿಯಲ್ಲಿರುತ್ತಾರೆ ಹಾಗಾಗಿ  ಗುಣಮಟ್ಟದ ಶಿಕ್ಷಣಕ್ಕಾಗಿ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷರಾದ ಕೆ.ಟಿ. ತಿಮ್ಮಾರೆಡ್ಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ನಾಗಭೂಷಣ್, ಮಾಜಿ ಜಿಲ್ಲಾಧ್ಯಕ್ಷರಾದ ಕೆ. ವೀರಣ್ಣ  ಮತ್ತು ಆರ್. ಮಾರುತೇಶ್ ಮಾತನಾಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ಬಿ.ಮಹಂತೇಶ್, ಉಪಾಧ್ಯಕ್ಷರಾಗಿ ರಮೇಶ್ ನಾಯ್ಕ, ಜಯಮ್ಮ, ಕೋಶಾಧ್ಯಕ್ಷರಾಗಿ ಎ.ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿಗಳಾಗಿ ಹನುಮಂತರೆಡ್ಡಿ ಎಂ.ಬಿ.ವಾಸಂತಿ ಮತ್ತು ತಾಲೂಕು ಅಧ್ಯಕ್ಷರಾಗಿ ಎಸ್.ಕೆಂಚಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎನ್ ರೂಪ, ಇವರು ತಾಲೂಕು ಪದಾಧಿಕಾರಿಗಳಾಗಿ ಪದಗ್ರಹಣ ಮಾಡಿದರು. ಜಿಲ್ಲಾ ಸಂಘಕ್ಕೆ ಗೌರವಾಧ್ಯಕ್ಷರಾಗಿ ಕೆ.ವೀರಣ್ಣ, ಕಾರ್ಯಾಧ್ಯಕ್ಷರಾಗಿ ಆರ್ ಕೃಷ್ಣಪ್ಪ ಅವರನ್ನ ತಾಲೂಕು ಸಂಘಕ್ಕೆ ಗೌರವಾಧ್ಯಕ್ಷರಾಗಿ ಎಸ್ ವೀರಣ್ಣ, ಕಾರ್ಯಾಧ್ಯಕ್ಷರಾಗಿ ಟಿ.ಎಸ್ ರವಿಶಂಕರ್ ಅವರನ್ನು ನಾಮನಿರ್ದೇಶನರಾಗಿ ಆಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ  ಬಿಆರ್‍ಸಿ ಸಂಪತ್ ಕುಮಾರ್ ಈ. ಅಕ್ಷರ ದಾಸೋಹ ಎಡಿಎಂ   ಹುಲಿಕುಂಟರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಜಿ.ಟಿ. ಹನುಮಂತಪ್ಪ, ಶಿವಮೂರ್ತಿ, ಜಿ.ಬಿ. ಮಮತ. ಮತ್ತು ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *