Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಒನಕೆ ಓಬವ್ವ ಜಯಂತಿ ಅದ್ದೂರಿ ಆಚರಣೆಗೆ ಸಿದ್ದತೆ : ಪೂರ್ವಭಾವಿ ಸಭೆಯಲ್ಲಿ ಮುಖಂಡರು ಭಾಗಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 20 : ಮುಂದಿನ ತಿಂಗಳು ನಡೆಯುವ ಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಂಬಂಧ ಪ್ರವಾಸಿ ಮಂದಿರದಲ್ಲಿ ಛಲವಾದಿ ಜನಾಂಗದವರು ಭಾನುವಾರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಛಲವಾದಿ ಜನಾಂಗದ ಮುಖಂಡ ಹೆಚ್.ಸಿ.ನಿರಂಜನಮೂರ್ತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಒನಕೆಯ ಮೂಲಕ ಶತ್ರುಗಳನ್ನು ಸದೆಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ನಾಡಿನಾದ್ಯಂತ ಪರಿಚಯಿಸಿರುವ ಒನಕೆ ಓಬವ್ವಳ ಜಯಂತಿಯನ್ನು ಸರ್ಕಾರದ ಜೊತೆ ನಾವುಗಳು ಕೈಜೋಡಿಸಿ ಆಚರಿಸಬೇಕಾಗಿರುವುದರಿಂದ ಛಲವಾದಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿಯನ್ನು ಯಶಸ್ವಿಗೊಳಿಸುಬೇಕು. ಜಯಂತಿಗೆ ಸಂಬಂಧಿಸಿದಂತೆ ನ.3 ರಂದು ಮತ್ತೊಮ್ಮೆ ನಡೆಯುವ ಪೂವಭಾವಿ ಸಭೆಗೆ ಛಲವಾದಿ ಸಮುದಾಯದವರು ಆಗಮಿಸಿ ಸೂಕ್ತ ಸಲಹೆಗಳನ್ನು ನೀಡುವಂತೆ ಮನವಿ ಮಾಡಿದರು.

ಡಾ.ಪಿ.ವಿ.ಶ್ರೀಧರಮೂರ್ತಿ ಮಾತನಾಡುತ್ತ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ. ಜನಾಂಗದ ಎಲ್ಲರ ಸಹಕಾರ ಅತಿ ಮುಖ್ಯ ಎಂದು ಕೋರಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡುತ್ತ ಛಲವಾದಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಾಗಿರುವುದರಿಂದ ಒನಕೆ ಓಬವ್ವಳ ಜಯಂತಿ ಮೂಲಕವಾದರೂ ಎಲ್ಲರೂ ಒಂದೆಡೆ ಸೇರೋಣ. ಮುಂದಿನ ಪೀಳಿಗೆಗೆ ಓಬವ್ವಳ ಸಾಹಸವನ್ನು ತಿಳಿಸುವುದರ ಜೊತೆಗೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ

ಜನಾಂಗದ ಇತರೆ ಮಕ್ಕಳನ್ನು ಉತ್ತೇಜಿಸಿದಂತಾಗುತ್ತದೆ. ಹೋರಾಟ, ಸಂಘಟನೆ ಮೂಲಕ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಂಡು ಮಕ್ಕಳನ್ನು ವಿದ್ಯಾವವಂತರನ್ನಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಶಾರದಾ ಬ್ರಾಸ್‍ಬ್ಯಾಂಡ್‍ನ ಗುರುಮೂರ್ತಿ ಮಾತನಾಡಿ ಒನಕೆ ಓಬವ್ವ ಜಯಂತಿಯಂದು ನಿಗಧಿತ ಸಮಯಕ್ಕೆ ಸರಿಯಾಗಿ ಮೆರವಣಿಗೆ ಹೊರಡಬೇಕು. ಅದಕ್ಕಾಗಿ ಸಮುದಾಯದ ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿದರೆ ಒಳ್ಳೆಯದು. ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಜಯಂತಿಯಲ್ಲಿ ಪ್ರೋತ್ಸಾಹಿಸಿದರೆ ಅದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುತ್ತೇನೆ. ಹೊಳಲ್ಕೆರೆ ರಸ್ತೆಯಲ್ಲಿರುವ ಗೌರಸಮುದ್ರ ಮಾರಮ್ಮನ ದೇವಸ್ಥಾನದ ಸಮೀಪದಿಂದ ಮೆರವಣಿಗೆ ಹೊರಡೋಣ ಎಂದು ಸಲಹೆ ನೀಡಿದರು.

ಭಾರ್ಗವಿ ದ್ರಾವಿಡ್ ಮಾತನಾಡುತ್ತ ಒನಕೆ ಓಬವ್ವ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಛಲವಾದಿ ಜನಾಂಗದವರು ಕುಟುಂಬ ಸಮೇತ ಜಯಂತಿಯಲ್ಲಿ ಪಾಲ್ಗೊಂಡು ಚಿತ್ರದುರ್ಗದಲ್ಲಿ ಓಬವ್ವಳನ್ನು ಸ್ಮರಿಸಿಕೊಳ್ಳುವಂತಾಗಬೇಕೆಂದು ಹೇಳಿದರು.

ಎಸ್.ಎನ್.ರವಿಕುಮಾರ್ ಮಾತನಾಡಿ ನ.11 ರಂದು ಸರ್ಕಾರದ ವತಿಯಿಂದ ಆಚರಿಸಲಾಗುವ ಒನಕೆ ಓಬವ್ವ ಜಯಂತಿಯಲ್ಲಿ ಛಲವಾದಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶಿಸುವಂತೆ ಮನವಿ ಮಾಡಿದರು.

ಶಿಕ್ಷಣ ಇಲಾಖೆಯ ನಾಗರಾಜ್, ಹೆಚ್.ಅಣ್ಣಪ್ಪಸ್ವಾಮಿ, ದಯಾನಂದ್, ಚನ್ನಬಸಪ್ಪ ಮುಸ್ಟೂರು, ಮಂಜಣ್ಣ, ಜಯರಾಂ ಕೆ. ಶಶಾಂಕ್, ರಂಗಸ್ವಾಮಿ ಚಿಕ್ಕಪುರ, ರಾಮಲಿಂಗಪ್ಪ, ಪರಮೇಶ್ ಪೂಜಾರ್, ಮಂಜುನಾಥ್, ಜಯಣ್ಣ, ನಾಗರಾಜ್ ಪೈಲೆಟ್, ಉಮಾಶಂಕರ್ ಸೇರಿದಂತೆ ಛಲವಾದಿ ವಂಶಸ್ಥರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿ ಯುದ್ಧ : ಶಿಶಿರ್ ಗೆ ಸವಾಲು ಹಾಕಿದ ಚೈತ್ರಾ..!

ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಶಿಶಿರ್ ಹಾಗೂ ಚೈತ್ರಾ ಅಣ್ಣ ತಂಗಿಯಂತೆ. ಚೈತ್ರಾ ಕುಗ್ಗಿದಾಗೆಲ್ಲ ಶಿಶಿರ್ ಧೈರ್ಯ ತುಂಬಿದ್ದಾರೆ. ಅದಕ್ಕಾಗಿಯೇ ಬಿಗ್ ಬಾಸ್ ತಂಗಿ ನಿನಗಾಗಿ ಎಂಬ ಫೋಸ್ಟರ್ ಅನ್ನೇ ರಿಲೀಸ್

ಬ್ಯಾಂಕ್‍ಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮದಾನ

ಚಿತ್ರದುರ್ಗ. ನ.21: ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರೆದರೆ

error: Content is protected !!