ಚಿತ್ರದುರ್ಗ | ಮಾರ್ಚ್ 6 ಮತ್ತು 8ರಂದು ಹೆಚ್.ಡಿ.ಪುರ ಸೇರಿದಂತೆ ಈ ಊರುಗಳಲ್ಲಿ ವಿದ್ಯುತ್ ವ್ಯತ್ಯಯ

1 Min Read

ಚಿತ್ರದುರ್ಗ. ಮಾ.05: 66/11 ಕೆ.ವಿ ಹೆಚ್.ಡಿ.ಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಕಾರಿಡಾರ್‍ನಲ್ಲಿ ದ್ವಿಮಾರ್ಗ ಟವರ್‍ಗಳಿಂದ ಅಸ್ತಿತ್ವದಲ್ಲಿರುವ ಏಕ ಮಾರ್ಗ ಟವರ್‍ಗಳನ್ನು ಬದಲಿಸುವ ಮೂಲಕ ಹೆಚ್.ಡಿ. ಪುರ ಟ್ಯಾಪ್ ಪಾಯಿಂಟ್‍ನಿಂದ ಹೆಚ್.ಡಿ ಪುರ ವಿವಿ ಕೇಂದ್ರದ ನಡುವೆ 66/11 ಕೆವಿ ಹೆಚ್.ಡಿ ಪುರದಲ್ಲಿ ಲಿಲೋ ವ್ಯವಸ್ಥೆ ಒದಗಿಸಲು ಕೊಯೊಟ್ ಕಂಡಕ್ಟರ್‍ನೊಂದಿಗೆ 9.163 ಕಿಮೀ ದೂರಕ್ಕೆ ಹೆಚ್ಚುವರಿ 66 ಕೆವಿ ಸಕ್ರ್ಯೂಟ್‍ಅನ್ನು ಒದಗಿಸಲು 66/11 ಕೆವಿ ಹೆಚ್.ಡಿ ಪುರ ವಿ.ವಿ ಕೇಂದ್ರಕ್ಕೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ವಿ.ವಿ.ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲ 11 ಕೆ.ವಿ.ಮಾರ್ಗಗಳಲ್ಲಿ ಇದೇ ಮಾರ್ಚ್ 06 ಮತ್ತು 08ರಂದು ಬೆಳಿಗ್ಗೆ 9 ರಿಂದದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

 

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು : ತಾಳ್ಯ ಕಾವಲು, ಉಪ್ಪರಿಗೇನಹಳ್ಳಿ, ಬೂದಿಪುರ, ನಲ್ಲಿಕಟ್ಟೆ, ತಾಳ್ಯ, ಮತ್ತಿಘಟ್ಟ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿ, ತೇಕಲವಟ್ಟಿ, ತೋಡರನಾಳ್, ಕೋಳಾಳ್ , ಬಿ.ಆರ್. ಗುಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *