ಚಿತ್ರದುರ್ಗ ನಗರ ಪೊಲೀಸರ ಕಾರ್ಯಾಚರಣೆ  | ಗಾಂಜಾ ಮಾರಾಟ, ಸೇವನೆ ಮಾಡುತ್ತಿದ್ದ 8 ಜನರ ಬಂಧನ

3 Min Read

 

ಚಿತ್ರದುರ್ಗ, (ಮೇ.17) : ಗಾಂಜಾ ಸೊಪ್ಪನ್ನು ಮಾರಾಟ ಮತ್ತು ಸೇವೆನೆ ಮಾಡುತ್ತಿದ್ದ 8 ಜನ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ, ಅವರಿಂದ 80 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಸೊಪ್ಪು, ನಗದು ಹಣ ಹಾಗೂ ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸೋಮಶೇಖರ,  ಭರತ್,  ಭಾಸ್ಕರಾಚಾರಿ,  ಗೌಸ್‍ಪೀರ್,  ದಸ್ತಗಿರಿ,  ಸಾತ್ವಿಕ್ ಬಾಬು,  ಫಕೃದ್ದೀನ್ ಮತ್ತು ದಾದಾಪೀರ್ ಬಂಧಿತರು.

ನಗರದ ಜಟ್ ಪಟ್ ನಗರದಿಂದ ಕುರುಬರ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ
ಸ್ಮಶಾನದ ಮುಂಭಾಗದಲ್ಲಿ ಯಾರೋ ಕೆಲವರು ಗಾಂಜಾ ಸೊಪ್ಪನ್ನು ಮಾರುವುದು ಮತ್ತು ಸೇದುವುದು ಮಾಡುತ್ತಿದ್ದಾರೆ
ಎಂಬ ಖಚಿತವಾದ ಮಾಹಿತಿ ಮೇರೆಗೆ ಎಸ್.ಪಿ. ಪರುಶುರಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಪೊಲೀಸ್ ಉಪಾಧೀಕ್ಷಕ ಪಾಂಡುರಂಗ, ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ನಯೀಂ ಅಹಮದ್ ರವರ
ಮಾರ್ಗದರ್ಶನದಲ್ಲಿ ನಗರ ಠಾಣೆಯ ಎ.ಎಸ್.ಐ ಸೈಯದ್ ಸಿರಾಜುದ್ದಿನ್,  ಮತ್ತು ಠಾಣಾ ಸಿಬ್ಬಂದಿಯವರಾದ ಹೆಚ್,ಸಿ-1223 ಶ್ರೀನಿವಾಸ, ಹೆಚ್.ಸಿ-1048 ರಂಗಸ್ವಾಮಿ, ಮತ್ತು ಸಿಪಿಸಿ- 2613 ಬೀರೇಶ್,  ಸಿಪಿಸಿ -2547 ಶಿವರಾಜ್ ರವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತಿದ್ದ ಮತ್ತು ಸೇವನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರುತ್ತದ್ದವರ ವಿವರ ;
1) ಸೋಮಶೇಖರ್ ಯಾನೆ ಡೆಡ್ಲಿ ಸೋಮ ತಂದೆ ಮಂಜುನಾಥ, ಸು 28 ವರ್ಷ, ಜೋಗಿಮಟ್ಟಿ ರಸ್ತೆ, 3 ನೇ ಕ್ರಾಸ್,
ಬಿ.ಎಸ್.ಎನ್.ಎಲ್ ಟವರ್ ಹತ್ತಿರ, ಚಿತ್ರದುರ್ಗ

2) ಭರತ್ ಯಾನೆ ಬೆಣ್ಣೆ ತಂದೆ ವೆಂಕಟೇಶ, ಸು 22 ವರ್ಷ, ದೇವರಾಜು ಬೀದಿ, ಬಸವಣ್ಣನ ದೇವಸ್ಥಾನದ ಹತ್ತಿರ
ಚಿತ್ರದುರ್ಗ ನಗರ ಎಂದು ತಿಳಿಸಿರುತ್ತಾರೆ.

ಗಾಂಜಾ ಸೊಪ್ಪನ್ನು ಸೇದುತ್ತಿದ್ದವರ ಹೆಸರು ಮತ್ತು ವಿಳಾಸ
1) ದಾದಾಪೀರ್ ಯಾನೆ ದಾದು ತಂದೆ ಲೇಟ್ ಬಾಷಾ ಸಾಬ್ 34 ವರ್ಷ, ಕೆಎಸ್‍ಎಫ್‍ಸಿ ಬ್ಯಾಂಕ್ ಬಳಿ ಚಿತ್ರದುರ್ಗ
2) ಬಾಸ್ಕರಾ ಚಾರಿ ತಂದೆ ಭೀಮಾಚಾರಿ 28 ವರ್ಷ, ಭರತ್ ಡ್ರೈ ಕ್ಲಿನರ್ ಬಳಿ ಆನೆ ಬಾಗಿಲು ಬಳಿ ಚಿತ್ರದುರ್ಗ
3) ದಸ್ತಗಿರಿ ತಂದೆ ನೂರುಲ್ಲಾ 26 ವರ್ಷ, ಕಾಮನಭಾವಿ ಬಡಾವಣೆ ಚಿತ್ರದುರ್ಗ ನಗರ.
4) ಗೌಸ್ ಪೀರ್ ತಂದೆ ದಸ್ತಗಿರಿ 25 ವರ್ಷ ಕೋಟೆ ರಸ್ತೆ ಚಂದ್ರಶೇಖರ್ ಮನೆ ಎದುರು ಚಿತ್ರದುರ್ಗ
5) ಬಾಬಾ ಪಕೃದ್ದೀನ್ ತಂದೆ ಮಹಬೂಬ್ ಬಾಷಾ, 21 ವರ್ಷ, ಕಾಳಮ್ಮನ ದೇವಸ್ಥಾನದ ಬಳಿ ಕಾಮನಭಾವಿ ಬಡಾವಣೆ, ಚಿತ್ರದುರ್ಗ.
6) ಸಾತ್ವಿಕ್ ತಂದೆ ಲೇಟ್ ಮಹಂತೇಶ್, 23 ವರ್ಷ, ಜೋಗಿಮಟ್ಟಿ ರಸ್ತೆ 4 ನೇ ಕ್ರಾಸ್, ಪಾರ್ಕ್ ಬಳಿ, ಚಿತ್ರದುರ್ಗ
ಎಂದು ತಿಳಿಸಿರುತ್ತಾರೆ.

ಮೇಲ್ಕಂಡ ಆರೋಪಿಗಳ ಪೈಕಿ ಸೀನ ಯಾನೆ ಜಪಾನ್ ಸೀನ, ಸೋಮಶೇಖರ್ ಯಾನೆ ಡೆಡ್ಲಿ ಸೋಮ, ಭರತ್ ಯಾನೆ ಬೆಣ್ಣೆ ಇವರುಗಳು ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಬಳ್ಳಾರಿ ಮರ್ಗವಾಗಿ ರೈಲಿನಲ್ಲಿ ಹೋಗಿ ಅಲ್ಲಿ ಗೋವಿಂದಪ್ಪ ಎಂಬುವವರ ಬಳಿ ಗಾಂಜಾ ಸೊಪ್ಪನ್ನು ಖರೀದಿಸಿಕೊಂಡು ಬ್ಯಾಗ್ ನಲ್ಲಿ ಹಾಕಿಕೊಂಡು ಬಳ್ಳಾರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದು, ಜಟ್-ಪಟ್ ನಗರದ ಬಳಿ ಇರುವ ಸ್ಮಶಾನ, ಗುಡ್ಡ, ಜಾಲಿಗಳಲ್ಲಿ, ಅಗಳೇರಿಯ ಕೆಂಚಪ್ಪನ ಬಾವಿ
ಹಾಗೂ ಗುಡ್ಡದ ಕಡೆಗಳಲ್ಲಿ ಹಾಗೂ ಇತರೆ ನಿರ್ಜನ ಪ್ರದೇಶಗಳಿಗೆ ಗ್ರಾಹಕರನ್ನು ಕರೆಯಿಸಿಕೊಂಡು ಸಣ್ಣ-ಸಣ್ಣ ಕವರ್
ಗಳಲ್ಲಿ ಗಾಂಜಾ ಸೊಪ್ಪನ್ನು ತುಂಬಿ ಗ್ರಾಹಕರಿಗೆ 400 ರೂಗಳಿಗೆ 1 ಪ್ಯಾಕೇಟ್ ನಂತೆ ಮಾರಾಟ ಮಾಡುತ್ತಿರುತ್ತಾರೆ ಎಂದು
ತಿಳಿದು ಬಂದಿರುತ್ತದೆ.

ವಶಪಡಿಸಿಕೊಂಡ ಒಟ್ಟು ಮಾಲಿನ ವಿವರ
1) 8 ಕೆ.ಜಿ ಮೌಲ್ಯದ ಅಂದಾಜು 80000=00 ರೂ ಬೆಲೆ ಬಾಳುವ ಒಣಗಿದ ಗಾಂಜಾ ಸೊಪ್ಪು
2) ಕೆ.ಎ-16-ಡಿ-3945 ನೇ ನೊಂದಣಿ ಸಂಖ್ಯೆಯ ಬಜಾಜ್ ಕಂಪನಿಯ ಕಪ್ಪು ಆಟೋ
3) 2000=00 ನಗದು ಹಣ

ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಯವರ ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *