Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಸಸಿ ನೆಟ್ಟು ವಿಜಯೇಂದ್ರ ಯಡಿಯೂರಪ್ಪನವರ ಹುಟ್ಟು ಹಬ್ಬ ಆಚರಣೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ,ನವೆಂಬರ್. 05 : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಸಿದ್ದಾರ್ಥ ಬಡಾವಣೆಯ ಉದ್ಯಾನವನದಲ್ಲಿ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ, ಋಷಿ ಸಂಸ್ಕೃತಿ ಗುರುಕುಲ ಮಹಾ ಸಂಸ್ಥಾನ ಅವರ ಸಹಯೋಗದೊಂದಿಗೆ ಬಿಜೆಪಿ ಮುಖಂಡರಾದ ಜಿಎಸ್ ಅನಿತ್ ಕುಮಾರ್ ಅವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿಎಸ್ ಅನಿತ್ ಕುಮಾರ್ ಮಾತನಾಡಿ, ಇಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಯೆಡಿಯೂರಪ್ಪನವರ ಅವರ ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ದೇಶ ಹಾಗೂ ವಿಶ್ವದಲ್ಲಿಯೇ ಪರಿಸರ ಕಲಿಶಿಸತವಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಆದ್ದರಿಂದ ಪ್ರತಿ ಮನೆಯಲ್ಲೂ ಒಂದು ಗಿಡ ನೆಡುವುದರ ಮೂಲಕ ಪರಿಸರವನ್ನು ಉಳಿಸಬೇಕು. ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಪರಿಸರ ಮತ್ತು ವನ್ಯಜೀವಿ ರಕ್ಷಣಾ ವೇದಿಕೆ ಯವರು ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೀವು ಮಾಡುವ ಉತ್ತಮ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಇರುತ್ತದೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ನವೀನ್ ಕುಮಾರ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ರಾಜ್ಯ ಸಂಚಾಲಕರಾದ  ರುದ್ರಮನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವೇದಮೂರ್ತಿ ಭೀಮಸಮುದ್ರ, ಅಜಯ್ ಕುಮಾರ್, ಬಸವರಾಜ್, ಫಕೀರಪ್ಪ, ಅಶೋಕ್,  ಪ್ರಸನ್ನ, ದುರ್ಗೇಶ್, ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಲಿಂಗರಾಜು ಸೇರಿದಂತೆ ಇತರರು ಇದ್ದರು. ಇದೇ ವೇಳೆ ಜಿ.ಎಸ್. ಕುಮಾರ್ ಅವರನ್ನು ಪರಿಸರ ಮತ್ತು ವನ್ಯಜೀವಿ ಸುರಕ್ಷಣಾ ವೇದಿಕೆಯಿಂದ ಸನ್ಮಾನಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದು ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ :ಎಷ್ಟಿದೆ ಇವತ್ತಿನ ರೇಟ್..?

ಚಿನ್ನ ಬೆಳ್ಳಿ ಬೆಲೆಯಲ್ಲಿ ಏರುವಾಗ ನೂರಾರು ರುಪಾಯಿ ಏರುತ್ತದೆ. ಇಳಿಯುವಾಗ ಒಂದೆರಡು ರೂಪಾಯಿಯಲ್ಲಿ ಇದೆ ಚಿನ್ನಾಭರಣ ಪ್ರಿಯರ ಬೇಸರ. ದೀಪಾವಳಿ ಹಬ್ಬದಲ್ಲಿ ಇದ್ದಕ್ಕಿದ್ದ ಹಾಗೇ ಚಿನ್ನ ಗಗನಕ್ಕೆ ಜಿಗಿದಿತ್ತು. ಈಗ ಕೊಂಚ ಕೊಂಚವೇ ಇಳಿಕೆಯಾಗುತ್ತಿದೆ.

ಟ್ರಾನ್ಸ್‌ಫರ್ ಗಾಗಿ 2 ಲಕ್ಷ ಕೊಟ್ಟಿದ್ದ.. ಯಾರಿಗೆ ಕೊಟ್ಟಿದ್ದ ಗೊತ್ತಿಲ್ಲ : ಆತ್ಮಹತ್ಯೆ ಮಾಡಿಕೊಂಡ ತಹಶಿಲ್ದಾರ್ ತಾಯಿ ನೋವು..!

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಹೆಸರು ಬರೆದಿಟ್ಟು ತಹಶಿಲ್ದಾರರ ಕಚೇರಿಯಲ್ಲಿ ಎಸ್ಡಿಎ ರುದ್ರಣ್ಣ ಯಡವಣ್ಣ ನೇಣಿಗೆ ಶರಣಾಗಿದ್ದಾರೆ. ಈ ಕೇಸಿನ ಬಗ್ಗೆ ಇದೀಗ ಅವರ ತಾಯಿ ನೊಂದು ಮಾತಾಡಿದ್ದಾರೆ. ನಿನ್ನೆ ರಾತ್ರಿ

ಅತಿಯಾದ ಮಳೆಯಿಂದ ದಾವಣಗೆರೆ ಶೇಂಗಾ ಬೆಳೆಗಾರರಿಗೆ ಶಾಕ್ : ಗುಣಮಟ್ಟದ ಶೇಂಗಾವೇ ಇಲ್ಲ..!

    ದಾವಣಗೆರೆ: ಮಾರುಕಟ್ಟೆಯಲ್ಲಿ ಶೇಂಗಾಗೆ ಉತ್ತಮ ಬೆಲೆ ಇದೆ. ಇದು ಶೇಂಗಾ ಬೆಳೆಗಾರರಿಗೆ ಸಕಾರವಾಗಿತ್ತು. ಆದರೆ ಹವಮಾನ ವೈಪರೀತ್ಯವೂ ರೈತರಿಗೆ ಸಹಕಾರ ಕೊಡಬೇಕಲ್ಲ..? ಬೆಲೆ ಇದ್ದರು ಬೆಳೆ ಚೆನ್ನಾಗಿ ಬಂದಿಲ್ಲದೆ ಇರುವುದೇ ರೈತರಿಗೆ

error: Content is protected !!