ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 13 : ನಗರದ ಹೊಳಲ್ಕೆರೆ ರಸ್ತೆಯ ನಂಜುಂಡಪ್ಪ ಲೇಔಟ್ ನಿವಾಸಿ ಹಾಗೂ ಕರಿಬಸವೇಶ್ವರ ಪ್ರಾವಿಜನ್ ಸ್ಟೋರ್ಸ್ ನ ಮಾಲಿಕರಾದ ಪಿ.ಎಸ್. ನಾಗರಾಜ ಶೆಟ್ಟಿ (76 ವರ್ಷ) ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ (ಆಗಸ್ಟ್.12, ಮಂಗಳವಾರ) 11.15 ಕ್ಕೆ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.




