ಚಿತ್ರದುರ್ಗ, .ಏ.20: ಅತ್ಯುನ್ನತ ಸೇವೆ ಹಾಗೂ ಸಾಧನೆ ತೋರಿದ ಜಿಲ್ಲೆಯ 10 ಜನ ಸರ್ಕಾರಿ ನೌಕರರು 2021-22 ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಆಯ್ಕೆಯಾಗಿದ್ದಾರೆ.
ಹಿರಿಯೂರು ತಾಲೂಕು ಬಬ್ಬೂರಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಶರಣಪ್ಪ ಜಂಗಂಡಿ,
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಬಿ.ಪ್ರಸನ್ನ ಕುಮಾರ್,
ಭೂ ದಾಖಲೆಗಳ ಉಪನಿರ್ದೇಶಕ ಹಾಗೂ ತಾಂತ್ರಿಕ ಸಹಾಯಕರಾದ ಎಂ.ಎಸ್.ಕೃಷ್ಣ ಪ್ರಸಾದ್,
ಜಿಲ್ಲಾ ಆಸ್ಪತ್ರೆ ಸಲಹಾ ವೈದ್ಯರು ಹಾಗೂ ನೆಫ್ರಾಲಜಿಸ್ಟ್ ಡಾ.ಡಿ.ಪ್ರಕಾಶ್,
ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿಯ ರಾಜಸ್ವ ನಿರೀಕ್ಷಕ ಎನ್.ಪಾಲಾಕ್ಷಪ್ಪ, ಮಠದಕುರುಬರಹಟ್ಟಿ ಪಿಡಿಓ ಆರ್.ಪಾತಣ್ಣ,
ಜಿಲ್ಲಾಧಿಕಾರಿ ಕಚೇರಿ ಪ್ರಥಮ ದರ್ಜೆ ಸಹಾಯಕ ಹೆಚ್.ಆರ್.ದಿವಾಕರ್, ಹೊಸದುರ್ಗ ಪುರಸಭೆ ಪರಿಸರ ಅಭಿಯಂತರ ತಿಮ್ಮರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ.ಎ,
ಚಿತ್ರದುರ್ಗ ಜಿಲ್ಲಾ ಉಪವಿಭಾಗಾಧಿಕಾರಿ ಕಚೇರಿಯ ವಾಹನ ಚಾಲಕ ಆರ್.ರಮೇಶ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಪುರಸ್ಕಾರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತಿದೆ.