ಚಿತ್ರದುರ್ಗ : ಟ್ರ್ಯಾಕ್ಟರ್ ಗೆ ಓಮಿನಿ ಡಿಕ್ಕಿ,  ಓರ್ವ ಸಾವು

suddionenews
1 Min Read

ಚಿತ್ರದುರ್ಗ,(ಡಿ.12) : ಭತ್ತದ ಹುಲ್ಲು ತುಂಬಿದ್ದ ಟ್ರ್ಯಾಕ್ಟರ್ ಗೆ ಓಮಿನಿ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದಂಡಿಗೇನಹಳ್ಳಿ ಗ್ರಾಮದ ಬಳಿ ಇಂದು (ಸೋಮವಾರ) ರಾತ್ರಿ 7:30 ಗಂಟೆಗೆ ನಡೆದಿದೆ.

ಓಮಿನಿ ವಾಹನವು ಭತ್ತದ ಲೋಡ್ ತುಂಬಿಕೊಂಡು ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ನ ಟ್ರೇಲರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಓಮಿನಿ ವಾಹನ ಜಖಂ ಆಗಿದೆ.

ಈ ಘಟನೆಯಲ್ಲಿ ದಾವಣಗೆರೆ ಮೂಲದ ರಂಗಸ್ವಾಮಿ( 27) ಸಾವನ್ನಪ್ಪಿದ್ದು, ಮಹೇಶ, ಮಹಂತೇಶ ಮತ್ತು ಅರುಣ ಗಾಯಗೊಂಡಿದ್ದು, ಅವರನ್ನು ಸಂತೇಬೆನ್ನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *