ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 19 : ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ(ಡಿಎಪಿಸಿ) ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೊಸ ಬಿಷಪ್‍ಗಳನ್ನು ಆಯ್ದ ತಾಲ್ಲೂಕುಗಳಿಗೆ ಸಹಾಯಕ
ಬಿಷಪ್‍ಗಳನ್ನು ನೇಮಕಗೊಳಿಸಿದೆ.
ಚಿತ್ರದುರ್ಗ ಗ್ರಾಮೀಣ ರೆ.ಫಾ. ಪ್ರಸನ್ನ,
ಚಳ್ಳಕೆರೆ ರೆ.ಫಾ. ಶಿವಮೂರ್ತಿ ಬಿ.
ಮೊಳಕಾಲ್ಮುರು ರೆ.ಫಾದರ್ ದೇವೆಂದ್ರಪ್ಪ ಎಚ್.ವಿ.
ಹಿರಿಯೂರು ರೆ.ಫಾ.ಗುರುಸ್ವಾಮಿ
ಹೊಳಲ್ಕೆರೆ ರೆ.ಫಾ.ಸೋಮಪ್ಪ,
ಹೊಸದುರ್ಗ ರೆ.ಫಾ.ರಮೇಶ್ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಹೊಸದಾಗಿ ನೇಮಕಗೊಂಡ ಬಿಷಪ್‍ಗಳ ಪವಿತ್ರ ದೀಕ್ಷೆ ಮತ್ತು ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ಹಡಸನ್ ಮೆಮೋರಿಯಲ್ ಕಮ್ಯುನಿಟಿ ಹಾಲ್‍ನಲ್ಲಿ ಮೆಟ್ರೋಪಾಲಿಟನ್ ಆರ್ಚ್ ಬಿಷಪ್ ರೆ.ಡಾ.ಆಮೋಸ್‍ಸಿಂಗ್‍ರವರ ಸಮ್ಮುಖದಲ್ಲಿ ನಡೆಯಿತು.
ದೀಕ್ಷೆಯ ನಂತರ ಕರ್ನಾಟಕದ ಆರ್ಚ್ ಬಿಷಪ್ ರೆ.ವಿನೋದ ಚಾಕೋರವರ ಅಧ್ಯಕ್ಷತೆಯಲ್ಲಿ ನಡೆದ ಪವಿತ್ರ ಸಿನಡ್ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.


