ಚಿತ್ರದುರ್ಗ | ಚಿಕ್ಕಗೊಂಡನಹಳ್ಳಿ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ : ಪ್ರತಿಜ್ಞಾವಿಧಿ ಸ್ವೀಕಾರ

1 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.31 : ಶಾಲಾ ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ಭಾರತದ ಅಖಂಡತೆ ಎತ್ತಿ ತೋರಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆದರ್ಶಗಳ ಕುರಿತು ಮನವರಿಕೆ ಮಾಡಿಕೊಡಬೇಕು  ಎಂದು ಚಿಕ್ಕಗೊಂಡನಹಳ್ಳಿ ಸ.ಹಿ.ಪ್ರಾ  ಮಾದರಿ ಆಂಗ್ಲ -ಕನ್ನಡ ಮಾಧ್ಯಮದ ಶಾಲಾ  ಬಡ್ತಿ ಮುಖ್ಯ ಶಿಕ್ಷಕ ದಿನೇಶರೆಡ್ಡಿ ಹೇಳಿದರು.

ತಾಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಸರ್ಕಾರಿ ಮಾದರಿ  ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ  ಶಾಲಾ ಶಿಕ್ಷಣ ಇಲಾಖೆ, ಶಾಲಾ  ಸಮಿತಿ ಹಾಗೂ ಶಾಲಾ ವತಿಯಿಂದ  ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮದಲ್ಲಿ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು.

ಚಿಕ್ಕಂದಿನ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಅಶಯಗಳು ಮತ್ತು ಜಾತ್ಯಾತೀತ ಮನೋಭಾವವನ್ನು ರೂಢಿಸಿ, ರಾಷ್ಟ್ರನಾಯಕರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಲು ಸರ್ಕಾರ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು.

ಸಂದರ್ಭದಲ್ಲಿ  ಮುಖ್ಯಶಿಕ್ಷಕ ದಿನೇಶರೆಡ್ಡಿ ಶಿಕ್ಷಕರಾದ ರುದ್ರಪ್ಪ, ಸುದರ್ಶನ್, ರೇವಣ್ಣ, ಅರುಣ್, ಅಣ್ಣಯ್ಯ, ವಿಜಯಲಕ್ಷ್ಮೀ, ಶೈಲಾ, ತ್ರಿವೇಣಿ ಆನಂದಮೂರ್ತಿ ಸುವರ್ಣ, ಕುಸುಮಾ ರೀಟಾಮಣಿ, ವೀಣಾ, ವಿಜೇತ ವಿದ್ಯಾರ್ಥಿಗಳು ಇದ್ದರು .

Share This Article
Leave a Comment

Leave a Reply

Your email address will not be published. Required fields are marked *