ಸುದ್ದಿಒನ್, ಚಿತ್ರದುರ್ಗ, ಮಾರ್ಚ್, 01 : ನಗರದ ವಿ.ಪಿ ಬಡಾವಣೆ 2 ಕ್ರಾಸ್ ನಿವಾಸಿ, ಶ್ರೀ ಬಸವೇಶ್ವರ ಮೋಟಾರ್ಸ್ ಸರ್ವಿಸ್ ಮತ್ತು ಬಸವೇಶ್ವರ ಚಿತ್ರಮಂದಿರದ ಮಾಲೀಕರಾದ

ಸಿ.ಪಿ ನಟರಾಜ್ (64 ವರ್ಷ) ಶನಿವಾರ ರಾತ್ರಿ 10.30 ಕ್ಕೆ ನಿಧನ ಹೊಂದಿದರು.

ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.ಅಂತ್ಯಕ್ರಿಯೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಸಂಜೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

