ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 27 : ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ನಾಡಿಗ ಲಚ್ಚಣ್ಣ ರೆಡ್ಡಿ (83 ವರ್ಷ) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಶುಕ್ರವಾರ) ಸಂಜೆ 4 ಗಂಟೆ ವೇಳೆಗೆ ನಿಧನರಾದರು.

ಮೃತರು ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಎನ್.ಎಲ್. ವೆಂಕಟೇಶ್ ರೆಡ್ಡಿ ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತಿಮ ದರ್ಶನಕ್ಕೆ ನಾಳೆ ಜ್ಞಾನಪೂರ್ಣ ಶಾಲೆಯ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾಳೆ (ಶನಿವಾರ) ಮಧ್ಯಾನ್ಹ 12 ಗಂಟೆಗೆ ದೊಡ್ಡಸಿದ್ದವ್ವನಹಳ್ಳಿಯ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನೇತ್ರದಾನ : ನಾಡಿಗ ಲಚ್ಚಣ್ಣ ರೆಡ್ಡಿ ಅವರ ಎರಡೂ ನೇತ್ರಗಳನ್ನು ಬಸವೇಶ್ವರ ಪುನರ್‍ಜ್ಯೋತಿ ಐ ಬ್ಯಾಂಕ್‍ಗೆ ದಾನ ನೀಡಿ ದುಃಖದಲ್ಲಿಯೂ ಕುಟುಂಬದವರು ಮಾನವೀಯತೆ ಮೆರೆದು ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಸಂತಾಪ: ಸಿಟಿ ಇನ್ಸಟ್ಯೂಟ್ ಉಪಾಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ, ಅಗಲಿಕೆ ನೋವು ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

