ಚಿತ್ರದುರ್ಗ, (ಸೆ.23) : ಜಿಲ್ಲೆಯ ಹೆಸರಾಂತ ಆಸ್ಪತ್ರೆ ಪತಂಜಲಿ ಆಸ್ಪತ್ರೆಗೆ ಎನ್ ಎ ಬಿ ಹೆಚ್ ಮಾನ್ಯತೆ ದೊರೆತಿದೆ.
ನಗರದ ಧರ್ಮಶಾಲಾ ರಸ್ತೆಯಲ್ಲಿ ಕಳೆದ 24 ವರ್ಷಗಳಿಂದ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುತ್ತಾ ಮುನ್ನಡೆಯುತ್ತಿದೆ. ಎಲ್ಲಾ ವರ್ಗದವರಿಗೆ ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಜನರ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾನ್ಯ ಜನರಿಗೆ, ಬಡವರಿಗೆ, ಮತ್ತಷ್ಟು ಹೆಚ್ಚಿನ ಆರೋಗ್ಯ ಸೇವೆ ನೀಡಲು ಆಧುನಿಕ ತಂತ್ರಜ್ಞಾನವುಳ್ಳ ಸಲಕರಣೆಗಳನ್ನು ಹೊಂದಿದ್ದು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗೆ ಜಿಲ್ಲೆಯಷ್ಟೇ ಅಲ್ಲದೇ ಪಕ್ಕದ ಜಿಲ್ಲೆಯ ಜನರೂ ಸಹಾ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ.
ಪತಂಜಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೈಗೊಂಡಿರುವ ಸಾಮಾಜಿಕ ಕಳಕಳಿ ಹಾಗೂ ಸುರಕ್ಷತೆ ಮತ್ತು ಗುಣಾತ್ಮಕ ಸೇವೆಯನ್ನು ಪರಿಗಣಿಸಿ ಎನ್ ಎ ಬಿ ಹೆಚ್ [ನ್ಯಾಷನಲ್ ಆಕಾರರ್ಡೇಷನ್ ಬೋರ್ಡ್ ಫಾರ್ ಹಾಸ್ಟಿಟಲ್ & ಹೇಲ್ತ್ ಕೇರ್ ಕಾಸ್ಟ್ಯೂಟಿಯಂಟ್ ಬಾಡಿ ಆಪ್ ಕ್ವಾಲಿಟಿ ಕೌನ್ಸಿಲ್ ಆಪ್ ಇಂಡಿಯಾ] ಮಾನ್ಯತೆ ದೊರೆತಿದೆ.
ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವ ಜೊತೆಗೆ ಸುರಕ್ಷಿತ ವಾತಾವರಣ ಹಾಗೂ ರೋಗಿಗಳಿಗೆ ಗುಣಾತ್ಮಕ ಮತ್ತು ವಿಶ್ವಾಸಾರ್ಹ ಸೇವೆ ನೀಡಿರುವುದನ್ನು ಮನಗಂಡು ಈ ಮಾನ್ಯತೆ ನೀಡಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ ಕೆ ಎಸ್ ಮುಕುಂದರಾವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.