ಚಿತ್ರದುರ್ಗ ನಗರಸಭೆ: ಆಯ-ವ್ಯಯ ತಯಾರಿಸಲು ಸಾರ್ವಜನಿಕರು ಸಲಹೆ ಸೂಚನೆ ನೀಡಲು ಕೋರಿಕೆ

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ.ಡಿ.12: ಚಿತ್ರದುರ್ಗ ನಗರಸಭೆಯ 2023-24ನೇ ಸಾಲಿನ ಆಯ-ವ್ಯಯ ತಯಾರಿಸಲು ಅಭಿವೃದ್ಧಿ ಯೋಜನೆಗಳ ಕುರಿತು ನಗರದ ಗಣ್ಯವ್ಯಕ್ತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು, ನೌಕರರು, ಪತ್ರಕರ್ತರು, ಹಿರಿಯ ನಾಗರೀಕರು, ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ಲಿಖಿತ ರೂಪದಲ್ಲಿ ಕಚೇರಿ ವೇಳೆಯಲ್ಲಿ ನೀಡಬಹುದಾಗಿದೆ.

ಚಿತ್ರದುರ್ಗ ನಗರಸಭೆಯ 2023-24ನೇ ಸಾಲಿನ ಆಯ-ವ್ಯಯ ತಯಾರಿಸುವ ಬಗ್ಗೆ 1ನೇ ಪೂರ್ವಭಾವಿ (ಸಾರ್ವಜನಿಕ ಸಲಹಾ ಸೂಚನಾ) ಸಭೆಯನ್ನು ಏರ್ಪಡಿಸಿರುವುದರಿಂದ ನಗರದ ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು, ನೌಕರರು, ಪತ್ರಕರ್ತರು, ಹಿರಿಯ ನಾಗಕರಿಕರು ಸಾರ್ವಜನಿಕರು ಇದೇ ಡಿಸೆಂಬರ್ 15ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರಸಭೆ ಕಚೇರಿ ಸಭಾಂಗಣದಲ್ಲಿ ಆಗಮಿಸಿ, ತಮ್ಮ ಸಲಹೆ ಸೂಚನೆ ನೀಡಲು ಕೋರಿದೆ ಅಥವಾ ಲಿಖಿತ ರೂಪದಲ್ಲಿ ಕಚೇರಿ ವೇಳೆಯಲ್ಲಿ ನೀಡಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಡಿ.14ರಂದು ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ

ಚಿತ್ರದುರ್ಗ,(ಡಿ.12) :   ಚಿತ್ರದುರ್ಗ ನಗರಸಭೆಯ ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿರುವ ಉಪಾಧ್ಯಕ್ಷರ ಸ್ಥಾನಕ್ಕೆ ಇದೇ ಡಿಸೆಂಬರ್ 14ರಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!