ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ..!

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 01 : ಆತನ ಭವಿಷ್ಯ ಉಜ್ವಲವಾಗುತ್ತದೆ.. ಮಗ ಮುಂದೆ ಡಾಕ್ಟರ್ ಆಗುತ್ತಾನೆ ಎಂದು ಪೋಷಕರು ಅದೆಷ್ಟು ಕನಸು ಕಂಡಿದ್ದರೋ ಏನೋ. ಆದರೆ ಆತನಿಗೆ ಡಾಕ್ಟರ್ ಪದವಿಯೇ ಕಂಟಕ ತಂದಿದೆ. ಓದುವುದಕ್ಕೆ ಕಷ್ಟ ಎಂದುಕೊಂಡಾತ ಭವಿಷ್ಯದ ಬಗ್ಗೆಯೂ ಯೋಚನೆ ಮಾಡದೆ, ಬದುಕನ್ನೇ ಕೊನೆಗೊಳಿಸಿಕೊಂಡಿದ್ದಾನೆ.

ಈತನ ಹೆಸರು ಮನೋಜ್. ಈಗಿನ್ನು 22 ವರ್ಷ. ಕನಸು ಜಿಗುರಿದ್ದ ವಯಸ್ಸು. ಬದುಕಿಗಾಗಿ ಏನನ್ನಾದರೂ ಮಾಡಬೇಕೆಂದುಕೊಳ್ಳುವ ವಯಸ್ಸು. ಮೆಡಿಕಲ್ ಓದುತ್ತಿದ್ದವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿತ್ರದುರ್ಗದ ಬಸವೇಶ್ವರ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿಯಲ್ಲಿದ್ದ. ಮೆಡಿಕಲ್ ಹಾಸ್ಟೇಲಿನಲ್ಲಿಯೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಈತ ಹಾಸನ ಮೂಲದ ವಿದ್ಯಾರ್ಥಿ. ಮೆಡಿಕಲ್ ಓದಲಿ ಎಂದು ತಂದೆ ತಾಯಿ ಚಿತ್ರದುರ್ಗದ ಕಾಲೇಜಿಗೆ ಸೇರಿಸಿದ್ದರು. ಚೆನ್ನಾಗಿ ಓದಲಿ ಎಂದು ಹಾಸ್ಟೆಲ್ ವ್ಯವಸ್ಥೆ ಕೂಡ ಮಾಡಿದ್ದರು. ಆದರೆ ಆ ಓದುವುದೇ ಒತ್ತಡವಾಗಿದೆ. ಡೆತ್ ನೋಟ್ ಬರೆದಿಟ್ಟಿರುವ ಮನೋಜ್, ನನ್ನ ಸಾವಿಗೆ ನಾನೇ ಕಾರಣ, ಓದುವ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ಹಾಸ್ಟೇಲ್ ಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃದೇಹವನ್ನು ಸರ್ಕಾರಿ ಆಸ್ಪತ್ರೆಗೆ ಪೋಸ್ಟ್ ಮಾರ್ಟಮ್ ಕಳುಹಿಸಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಓದುವುದಕ್ಕೆ ಕಷ್ಟವಾಗ್ತಾ ಇದೆ ಎಂದು ಹೇಳಿದ್ದರೆ ಮನೆಯಲ್ಲಿ ಅರ್ಥ ಮಾಡಿಕೊಳ್ಳುತ್ತಿದ್ದರೋ ಏನೋ. ಆದರೆ ಜೀವನವನ್ನೇ ತೆಗೆದುಕೊಳ್ಳುವ ಹಂತಕ್ಕೆ ತಲುಪಬಾರದಿತ್ತು. ಈಗ ಆ ಹುಡುಗನ ಬದುಕು ನಾಶ, ತಂದೆ ತಾಯಿಯ ಕನಸು ನುಚ್ಚು ನೂರು. ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ದುಃಖದಲ್ಲಿ ಮುಳುಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *