ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.16 : ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಈಗಾಗಲೇ ತಯಾರಿ ನಡೆಯುತ್ತಿದೆ. ಈಗಾಗಲೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಏರುತ್ತಲೆ ಇದೆ. ಸಚಿವ ಆರ್.ಬಿ. ತಿಮ್ಮಾಪುರ ಮಗನಿಗಾಗಿ ಚಿತ್ರದುರ್ಗ ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದಾರಾ ಎಂಬ ಚರ್ಚೆಗಳು ಶುರುವಾಗಿವೆ. ಅದಕ್ಕೆ ಕಾರಣ ಅವರೇಳಿದ ಮಾತುಗಳೇ.
ಚಿತ್ರದುರ್ಗ ಲೋಕಸಭಾ ಚುನಾವಣೆ : ಟಿಕೆಟ್ ಗಾಗಿ ಪುತ್ರನ ಪರ ಬ್ಯಾಟಿಂಗ್ : ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದೇನು ? pic.twitter.com/ATtG2MIJlh
— suddione-kannada News (@suddione) October 16, 2023
ಈಗಾಗಲೇ ಜಿಲ್ಲೆಯಲ್ಲಿ ಈ ವಿಚಾರವಾಗಿ ಬಹಳಷ್ಟು ಗಾಸಿಪ್ ಹಬ್ಬಿದೆ. ಹೀಗಾಗಿ ಈ ಸಂಬಂಧ ಇಂದು ಮಾತನಾಡಿರುವ ಆರ್ ತಿಮ್ಮಾಪುರ, “ನಾನು ನನ್ನ ಮಗ ಅಭ್ಯರ್ಥಿ ಅಂತ ಹೇಳಿಲ್ಲ, ಇಲ್ಲಿನ ಜನ, ಶಾಸಕರು, ಹೈಕಮಾಂಡ್ ಎಲ್ರೂ ಒಪ್ಪಬೇಕು. ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಟಿಕೆಟ್ ಗಾಗಿ ಇಲ್ಲಿನ ಜನನಾಯಕರು ಪ್ರಯತ್ನ ಮಾಡ್ತಾ ಇದ್ದಾರೆ. ಎಲ್ಲ ಹೈಕಮಾಂಡ್ ಗೆ ಬಿಟ್ಟ ವಿಚಾರ, ನಾನು ಒತ್ತಡ ಹಾಕಿ ನನ್ನ ಮಗನ ಆಯ್ಕೆ ಮಾಡೋಕೆ ಆಗಲ್ಲ ಎಂದರು. ನನ್ನ ಮಗನಿಗೆ ಟಿಕೆಟ್ ಬೇಕು ಎಂದರೆ ಇಲ್ಲಿನ ಜನ, ನಾಯಕರು ಎಲ್ಲರೂ ಒಪ್ಪಬೇಕು ಎಂದು ಹೇಳಿದರು.
ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಬಿಎನ್. ಚಂದ್ರಪ್ಪ, ಜೆಜೆ ಹಟ್ಟಿ ತಿಪ್ಪೇಸ್ವಾಮಿ ಅವರು ಟಿಕೆಟ್ ಪ್ರಯತ್ನ ಮಾಡ್ತಿದ್ದಾರೆ. ಅವರ ಮಧ್ಯೆ ನೀನು ಪ್ರಯತ್ನ ಮಾಡು ಅಂತ ಹೇಳಿದ್ದೇನೆ ಎಂದರು ಪರೋಕ್ಷವಾಗಿ ಮಗ ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಇನ್ನು ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ವಿಚಾರಕ್ಕೆ ಮಾತನಾಡಿದ ಅವರು, ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಬಹಳ ವರ್ಷದಿಂದ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ. ಅದನ್ನು ನಾವು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಇಲಾಖೆಯಲ್ಲಿ ಲಂಚಾವತಾರ ಇರೋದು ಗಮನಕ್ಕೆ ಇದೆ. ಇದು ಎಷ್ಟೋ ವರ್ಷಗಳ ಬಳುವಳಿಯಾಗಿ ಬಂದಿದೆ. ಯಾವ ಯಾವ ರೀತಿಯಲ್ಲಿ ತಡೆಯುವ ಕೆಲಸ ಮಾಡೋಣ. ಇದರ ಬಗ್ಗೆ ಸಿಎಂಗೆ ಹಲವಾರು ಬಾರಿ ಪತ್ರ ಬರೆದಿದ್ದಾರೆ. ನಾನು ಸಚಿವ ಆಗಿದ್ದೇನೆ ಬಗೆಹರಿಸುವೆ ಎಂದು ಭರವಸೆ ನೀಡಿದರು.