ಚಿತ್ರದುರ್ಗ ಲೋಕಸಭಾ ಚುನಾವಣೆ | ಈ ಬಾರಿ ಬಿಜೆಪಿಯಿಂದ ರಘುಚಂದನ್‍ ಗೆ ಟಿಕೆಟ್ ನೀಡಿ : ತಿಪ್ಪೇಸ್ವಾಮಿ

2 Min Read

 

 

ವರದಿ ಮತ್ತು ಫೋಟೋ ಕೃಪೆ :
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 15 :  ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇದುವರೆವಿಗೂ ಹೊರಗಿನವರು ಬಂದು ಆಯ್ಕೆಯಾಗಿದ್ದಾರೆ, ಹೊರೆತು ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಯಾವ ಕಾಳಜಿಯನ್ನು ವಹಿಸಿಲ್ಲ, ಈ ಹಿನ್ನಲೆಯಲ್ಲಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಥಳೀಯರಾದ ರಘುಚಂದನ್‍ರವರಿಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರನ್ನು ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಜಿಲ್ಲಾಧ್ಯಕ್ಷರಾದ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯ ಅಕ್ಕ-ಪಕ್ಕದ ಜಿಲ್ಲೆಗಳಾದ ದಾವಣಗರೆ, ತುಮುಕೂರು ಜಿಲ್ಲೆಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿಯಾಗಿದೆ.  ಇದಕ್ಕೆ ಕಾರಣ ಅಲ್ಲಿ ಸ್ಥಳೀಯರು ಲೋಕಸಭಾ ಸದಸ್ಯರಾಗಿದ್ದಾರೆ. ಇದರಿಂದ ಅವರಲ್ಲಿ ಬದ್ದತೆ ಇದ್ದು ಕ್ಷೇತ್ರವನ್ನು ಅಭಿವೃದ್ದಿ ಮಾಡಿದ್ದಾರೆ. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರು ಹೊರಗಿನವರಾಗಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ದಿ ಬಗ್ಗೆ ಕಾಳಜಿ ಇಲ್ಲ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕೆಂಬ ಆಸೆಯೂ ಸಹಾ ಇಲ್ಲ ಇದರಿಂದ ಚಿತ್ರದುರ್ಗ ಕಳೆದ 20 ವರ್ಷದ ಹಿಂದೆ ಯಾವ ರೀತಿ ಇದೆ ಈಗಲೂ ಸಹಾ ಅದೇ ರೀತಿ ಇದೆ ಎಂದು ಆರೋಪಿಸಿದರು.

ಈ ಭಾರಿಯು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹೊರಗಿನವರಿಗೆ ಪಕ್ಷದ ಟಿಕೇಟ್ ನೀಡುವ ಬದಲು ಸ್ಥಳಿಯರಿಗೆ ಟೀಕೇಟ್ ನೀಡಿದರೆ ಅವರು ಗೆಲುವು ಸಾಧಿಸುವುದಲ್ಲಿಯೂ ಮಂದೆ  ಇರುತ್ತಾರೆ ಅಲ್ಲದೆ ಚಿತ್ರದುರ್ಗವನ್ನು ಅಭೀವೃದ್ದಿ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ಬಿಜೆಪಿಯವತಿಯಿಂದ ಶಾಸಕ ಎಂ. ಚಂದ್ರಪ್ಪರವರ ಪುತ್ರರಾದ ರಘುಚಂದನ್ ರವರಿಗೆ ಟಿಕೆಟ್ ನೀಡುವುದರ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕಿದೆ ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದ್ದು ಇದರ ಬಗ್ಗೆ ಇದುವರೆವಿಗೂ ಯಾವ ಸಂಸದರು ಸಹಾ ಗಮನ ನೀಡಿಲ್ಲ ಬರೀ ಸಭೆಯನ್ನು ಮಾಡುವುದರ ಮೂಲಕ ಕಾಗದದಲ್ಲಿ ಅಭಿವೃದ್ದಿಯನ್ನು ತೋರಿಸುತ್ತಿದ್ದಾರೆ ಎಂದು ತಿಪ್ಪೇಸ್ವಾಮಿ ದೂರಿದರು.

ಈ ಭಾಗಕ್ಕೆ ಯಾವುದೇ ರೀತಿಯ ಕೃಗಾರಿಕೆಗಳಾಗಲಿ, ಕಂಪನಿಗಳಾಗಲಿ ಬಾರದೇ ಇರುವುದರಿಂದ ಇಲ್ಲಿನ ಯುವ ಜನತೆ ಕೆಲಸವನ್ನು ಹುಡುಕಿಕೊಂಡು ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ಇದರಿಂದ ನಮ್ಮ ಜಿಲ್ಲೆ ಯುವ ಸಂಪತ್ತು ಖಾಲಿಯಾಗುತ್ತಿದೆ ನಮ್ಮ ಯುವ ಜನತೆಯನ್ನು ಇಲ್ಲಿಯೇ ಹಿಡಿದಿಟ್ಟುಕೊಳ್ಳುವಂತಹ ಕೈಗಾರಿಕೆಗಳು ವಿವಿಧ ಕಂಪನಿಗಳು ಬರುವಂತೆ ಮಾಡಬೇಕಿರುವುದು ಚುನಾಯಿತ ಪ್ರತಿನಿಧಿಗಳ ಕೆಲಸವಾಗಿದೆ ಆದರೆ ಇದನ್ನು ಯಾರು ಸಹಾ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರ ಮನು, ಜಿಲ್ಲಾ ಕಾರ್ಯದರ್ಶಿ ಮೋಹನ್, ಸದಸ್ಯರಾದ ರಂಗನಾಥ್, ಗಂಗಾಧರ್, ಕುಮಾರ್ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *