ಚಿತ್ರದುರ್ಗ ಲೋಕಸಭಾ ಚುನಾವಣೆ | ಕಾಂಗ್ರೆಸ್ ಬಗ್ಗೆ ಶೇಕಡ 70 ರಷ್ಟು ಒಲವಿದೆ, ಬಿಜೆಪಿಯವರು ಭ್ರಮೆಯಲ್ಲಿದ್ದಾರೆ : ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 04 :  ಲೋಕಸಭಾ ಚುನಾವಣೆಯಲ್ಲಿ ಶೇಕಡ 70 ರಷ್ಟು ಕಾಂಗ್ರೆಸ್ ಬಗ್ಗೆ ಒಲವಿದೆ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂಬ ಉತ್ಸಾಹದಲ್ಲಿದ್ದಾರೆ ಎಂದು ಅಭ್ಯರ್ಥಿ ಚಂದ್ರಪ್ಪ ಹೇಳಿದರು.

ಅವರು ಮಾಧ್ಯಮಗಳೊಂದಿಗೆ ಮಾತಾಡಿದರು.ನಾವು ಮತ್ತು ಪಕ್ಷ ಹಾಗೂ ಜಾತ್ಯಾತೀತ ತತ್ವ ಭದ್ರವಾಗಿದೆ. ಕಾರಜೋಳ ಬಂದಿರುವುದರಿಂದ ನಮಗೇನು ಸಮಸ್ಯೆ ಇಲ್ಲ. ಐದು ಗ್ಯಾರಂಟಿ ಯೋಜನೆಗಳು ಭದ್ರವಾಗಿವೆ. ಅನ್ಯ ಪಕ್ಷದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಬಗ್ಗೆ ಮಾತಾಡುವ ಸಮಯವನ್ನು ಪಕ್ಷದ ಸಂಘಟನೆಗೋಸ್ಕರ ಬಳಸಿಕೊಳ್ಳುತ್ತೇವೆ ಎಂದರು.

ನಮ್ಮಲ್ಲಿ ಏಳು ಜನ ಶಾಸಕರಿದ್ದಾರೆ. ಆಂಜನೇಯ ಅವರು ಕಡಿಮೆ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಯಾರೇ ಬಂದರೂ ನಮ್ಮ ಎದುರಾಳಿಗಳೇ ಅವರಿಗೆ ನಾವು ಗೌರವಿಸುತ್ತೇವೆ. ನಾವು ಗೆಲ್ಲುತ್ತೇವೆ ಮತಗಳ ಅಂತರವನ್ನು ಜನರಿಗೆ ಬಿಡುತ್ತೇವೆ. ಕಾರಜೋಳ ಬಂದ ಮೇಲೆ ನಮ್ಮ ಪಕ್ಷ ಮತ್ತಷ್ಟು ಸದೃಢವಾಗಿದೆ. ಬಿಜೆಪಿಯವರು ಭ್ರಮೆಯಲ್ಲಿದ್ದಾರೆ ಎಂದು ಚಂದ್ರಪ್ಪ ತಿಳಿಸಿದರು.

ನಾನೇನು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದೀಪಹಚ್ಚಲು ಯಾರೂ ಇರುವುದಿಲ್ಲ ಎಂದು ಹೇಳುವುದನ್ನುನಾನು ಒಪ್ಪುವುದಿಲ್ಲ. ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭದ್ರವಾಗಿದೆ ಅದ್ಹೇಗೆ ದೀಪಹಚ್ಚಲು ಸಾಧ್ಯವಿಲ್ಲ. ಏನೂ ಕೆಲಸ ಮಾಡದೆ ಬುರುಡೆ ಬಿಡುವವರ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *