in ,

ಚಿತ್ರದುರ್ಗ : ಡಿವೈಡರ್ ಗೆ ಡಿಕ್ಕಿ ಹೊಡೆದ ಲಿಕ್ಕರ್ ಲಾರಿ ; 24 ಗಂಟೆಯಾದರೂ ನಿಂತಲ್ಲೇ ನಿಂತದ್ದು ಯಾಕೆ ?

suddione whatsapp group join

ಚಿತ್ರದುರ್ಗ, (ಫೆ.06) : ಭಾನುವಾರ(ಫೆ.05) ಮುಂಜಾನೆ ಸುಮಾರು ಎರಡು ಗಂಟೆಯ ಸಮಯದಲ್ಲಿ ಮದ್ಯ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ನಗರದ ಸಾಯಿಬಾಬಾ ಮಂದಿರದ ಬಳಿ ಜೆಸಿಆರ್ ಕಡೆಗೆ ಹೋಗುವ ಮಾರ್ಗದಲ್ಲಿರುವ ರಸ್ತೆಯ ವಿಭಜಕಕ್ಕೆ ಗೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಈ ಘಟನೆ ನಡೆದು 24 ಗಂಟೆಯಾದರೂ ನಡುರಾತ್ರಿಯಲ್ಲಿ, ನಡುಊರಿನಲ್ಲಿ, ನಡು ರಸ್ತೆಯಲ್ಲಿ ಅಪಘಾತವಾದ ಲಿಕ್ಕರ್ ಲಾರಿ ಮಾತ್ರ ಕದಲದೇ ಇನ್ನೂ ನಿಂತಲ್ಲಿಯೇ ನಿಂತಿದ್ದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿದೆ.

ಚಿತ್ರದುರ್ಗ ಮೂಲದ ಲಾರಿಯನ್ನು ಮಂಡ್ಯದವರು ಖರೀದಿಸಿರುತ್ತಾರೆ. ಮದ್ಯವನ್ನು ತುಂಬಿಕೊಂಡಿದ್ದ ಲಾರಿಯು ನಂಜನಗೂಡಿನಿಂದ ದೂರದ ಗದಗಕ್ಕೆ ಮಂಡ್ಯ, ಹೊಸದುರ್ಗ, ಚಿತ್ರದುರ್ಗ ಮಾರ್ಗವಾಗಿ ಗದಗಕ್ಕೆ ಹೊರಟಿತ್ತು. ಚಿತ್ರದುರ್ಗಕ್ಕೆ ಮುಂಜಾನೆ ಸಮಯ ಎರಡು ಗಂಟೆ ವೇಳೆಗೆ ತಲುಪಿದೆ. ಚಾಲಕನು ಬೇರೆ ಊರಿನವನಾಗಿದ್ದರಿಂದ ಚಿತ್ರದುರ್ಗದ ರಸ್ತೆಗಳು ಮತ್ತು ರಸ್ತೆಗಳ ಮಧ್ಯದಲ್ಲಿ ನಿರ್ಮಾಣವಾದ ಡಿವೈಡರ್ ಗಳ ಬಗ್ಗೆ ಅಷ್ಟಾಗಿ ಚಾಲಕನಿಗೆ ಪರಿಚಯವಿರಲಿಲ್ಲ. ಮತ್ತು ಆ ಸಮಯದಲ್ಲಿ ಅಲ್ಲಿ ಬೀದಿ ದೀಪದ ಬೆಳಕು ಇಲ್ಲದೇ ಕತ್ತಲೆ ಇದ್ದು, ಡಿವೈಡರ್ ಇರುವ ಯಾವುದೇ ಸೂಚನಾ ಫಲಕಗಳು ಇಲ್ಲದ ಕಾರಣ ಲಾರಿ ಚಾಲಕನು ಗಾಯತ್ರಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ ರಸ್ತೆ ವಿಶಾಲವಾಗಿರುವಂತೆ ಮುಂದೆಯೂ ಇದೆ ಎಂದ ತಿಳಿದುಕೊಂಡು ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಸಾಯಿಬಾಬಾ ದೇವಸ್ಥಾನದ ‌ಮಂಭಾಗದಲ್ಲಿ, ಜೆಸಿಆರ್ ಕಡೆಗೆ ಹೋಗುವ ರಸ್ತೆಯಲ್ಲಿರುವ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಲಾರಿಯ ಮುಂಭಾಗ ನುಜ್ಜುಗುಜ್ಜಾಗಿದೆ.

ವಿಷಯ ತಿಳಿಯಕೂಡಲೇ ಗಸ್ತು ತಿರುಗುತ್ತಿದ್ದ ಪೊಲೀಸರು ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಿಸಿದ್ದಾರೆ. ಲಾರಿಯಲ್ಲಿ ಮದ್ಯ ತುಂಬಿದ್ದ ಕಾರಣದಿಂದಾಗಿ ಅಬಕಾರಿ ಇಲಾಖೆಯವರಿಂದ ಸ್ಥಳ ಪರಿಶೀಲನೆ ನಡೆಸಿ, ಅದರಲ್ಲಿ ಇರುವ ಸರಕು ಪರಿಶೀಲಿಸಿ ದೂರು ದಾಖಲು ಸೇರಿದಂತೆ ಇತರೆ ವಿಧಾನಗಳು ನಡೆಯಬೇಕು. ಭಾನುವಾರ ರಜಾ ದಿನವಾದ್ದರಿಂದ ಸಾಧ್ಯವಾಗದ ಕಾರಣ ಇವೆಲ್ಲವೂ ಇಂದು (ಸೋಮವಾರ) ನಡೆಯುತ್ತವೆ ಎಂದು ತಿಳಿದು ಬಂದಿದೆ.

ಮೊದಲು ಲಾರಿಯಲ್ಲಿರುವ ಮದ್ಯವನ್ನು ಬೇರೊಂದು ಲಾರಿಗೆ ಡಂಪ್ ಮಾಡಿ ನಂತರ ವಾಹನವನ್ನು ತೆರವು ಮಾಡಲಾಗುತ್ತದೆ. ಇಂದು ಮಧ್ಯಾನ್ಹದ ವೇಳೆಗೆ ಈ ತೆರವು ಕಾರ್ಯಾಚರಣೆ ಮುಗಿಯುವ ಸಾಧ್ಯತೆಯಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಫೆಬ್ರವರಿ 07 ರಂದು ತುರುವನೂರು ಶ್ರೀ ಆಂಜನೇಯಸ್ವಾಮಿ ಉಚ್ಛಾಯ : ಜಾತ್ರೆಯ ಹಿನ್ನೆಲೆ ಮತ್ತು ವಿಶೇಷತೆ…!

ಶಿಕ್ಷಕ ರಮೇಶ್ ನಿಧನ