ಚಿತ್ರದುರ್ಗ : ಡಿವೈಡರ್ ಗೆ ಡಿಕ್ಕಿ ಹೊಡೆದ ಲಿಕ್ಕರ್ ಲಾರಿ : ಆರಂಭವಾದ ತೆರವು ಕಾರ್ಯಾಚರಣೆ…!

1 Min Read

ಚಿತ್ರದುರ್ಗ, (ಫೆ.06) : ನಗರದ ಸಾಯಿಬಾಬಾ ಮಂದಿರದ ಬಳಿ ಭಾನುವಾರ  ಮುಂಜಾನೆ ಸುಮಾರು ಎರಡು ಗಂಟೆಯ ಸಮಯದಲ್ಲಿ ಅಬಕಾರಿ ಇಲಾಖೆಯ ಮದ್ಯ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಜೆಸಿಆರ್ ಕಡೆಗೆ ಹೋಗುವ ಮಾರ್ಗದಲ್ಲಿರುವ ರಸ್ತೆಯ ವಿಭಜಕಕ್ಕೆ ಗೆ ಡಿಕ್ಕಿ ಹೊಡೆದಿತ್ತು. ಸುಮಾರು 40 ಗಂಟೆಗಳ ನಂತರ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದ ಲಿಕ್ಕರ್ ಲಾರಿಗೆ ತೆರವು ಭಾಗ್ಯ ಕೂಡಿಬಂದಿದೆ.

ಘಟನಾ ಸ್ಥಳದಲ್ಲಿ ಸಂಚಾರಿ ಪೊಲೀಸರು ಅಪಘಾತವಾದ ಕ್ಷಣದಿಂದ ಅಲ್ಲಿಯೇ ಇದ್ದು, ಲಿಕ್ಕರ್ ತುಂಬಿದ್ದ ಲಾರಿಗೆ ಸೂಕ್ತ ಭದ್ರತೆ ಕಲ್ಪಿಸಿದ್ದರು. ಸೋಮವಾರ ಬೆಳಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಆಗಮಿಸಿ ಲಾರಿಯಲ್ಲಿದ್ದ ಮದ್ಯದ ಬಾಟಲಿಗಳು ಒಂದು ವೇಳೆ ಡ್ಯಾಮೇಜ್ ಆಗಿದ್ದರೆ ಅವುಗಳನ್ನು ಪರಿಶೀಲಿಸಿ ಲೆಕ್ಕ ತೆಗೆದುಕೊಂಡು ಇಲಾಖೆಯ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮಕೈಗೊಂಡರು.

ಕೊನೆಗೂ ಸಂಜೆ 4 ಗಂಟೆ ವೇಳೆಗೆ ತೆರವು ಕಾರ್ಯಾಚರಣೆ ಆರಂಭವಾಯಿತು. ಮದ್ಯವನ್ನು ಬೇರೆ ಲಾರಿಗೆ ಲೋಡ್ ಮಾಡಿ, ಅದನ್ನು ಗದಗಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ನಂತರ ನುಜ್ಜುಗುಜ್ಜಾಗಿದ್ದ ಲಾರಿಯನ್ನು ಕ್ರೇನ್ ಮುಖಾಂತರ ತೆರವು ಮಾಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ರಾತ್ರಿ 10 ಗಂಟೆ ಆಗಬಹುದು.

ಭಾನುವಾರ ಮುಂಜಾನೆಯಿಂದ ಸೋಮವಾರ ರಾತ್ರಿವರೆಗೂ ಸಂಚಾರಿ ಪೊಲೀಸರು ಮತ್ತು ಅಬಕಾರಿ ಇಲಾಖೆಯವರು ಘಟನಾ ಸ್ಥಳದಲ್ಲೇ ಇದ್ದು ಎಲ್ಲವನ್ನೂ ಕಾನೂನಿನ ಪ್ರಕಾರ ಕೆಲಸ ನಿರ್ವಹಿಸಿದರು.

ರಸ್ತೆಯ ಒಂದು ಮಾರ್ಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರಿಂದ ಭಾನುವಾರ ಮತ್ತು ಸೋಮವಾರ ವಾಹನ ಸವಾರರು ಪರದಾಡಬೇಕಾಯಿತು.

Share This Article
Leave a Comment

Leave a Reply

Your email address will not be published. Required fields are marked *