Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಉಪನ್ಯಾಸಕರ ಟೀಂವರ್ಕ್‌ ನಿಂದ ಜಿಲ್ಲೆಯನ್ನು ಟಾಪ್‌ ಟೆನ್ ಗೆ ತರೋಣ : ಪಿಯು ಫಲಿತಾಂಶವನ್ನು ಉತ್ತಮಗೊಳಿಸಲು ಎನ್ .ರಾಜು ಕರೆ

Facebook
Twitter
Telegram
WhatsApp

ಚಿತ್ರದುರ್ಗ,(ಜು.23) : ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಬೇಕಾದರೆ ಉಪನ್ಯಾಸಕರ ಟೀಂವರ್ಕ್‌ ಬಹಳ ಮುಖ್ಯ, ಪಿಯು ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಹಿಂದುಳಿದಿದ್ದು ನಾವೆಲ್ಲರೂ ಶ್ರದ್ಧೆಯಿಂದ ಒಟ್ಟಾಗಿ ಶ್ರಮಿಸಿ ಟಾಪ್ ಟೆನ್ ಮೂಲಕ ಉತ್ತಮ ಫಲಿತಾಂಶ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು  ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್ .ರಾಜು ಹೇಳಿದರು.

ನಗರದ  ಎಸ್‌ ಆರ್‌ ಎಸ್‌ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ, “ದ್ವಿತೀಯ ಪಿಯುಸಿ ಇಂಗ್ಲೀಷ್‌ ವಿಷಯದಲ್ಲಿ ಫಲಿತಾಂಶವನ್ನು ಉತ್ತಮಗೊಳಿಸುವ ಬಗೆ” ಮಾಹಿತಿ ಕಾರ್ಯಾಗಾರವನ್ನ ಉದ್ಘಾಟಿಸಿ ಮಾತನಾಡಿದರು.

ಈ ಬಾರಿ ಜಿಲ್ಲೆಯ ಫಲಿತಾಂಶವನ್ನು ಉತ್ತಮಗೊಳಿಸುವ ರೂಪುರೇಷೆಗಳನ್ನ ಹಾಕಿಕೊಳ್ಳಬೇಕು. ಫಲಿತಾಂಶ ಹೆಚ್ಚಿನ ಮಟ್ಟದಲ್ಲಿ ಕುಸಿದಿರುವ ಏಳು ವಿಷಯಗಳನ್ನು ನಿಗದಿಪಡಿಸಿ ಒಂದು ವಾರ ಸತತವಾಗಿ ಪ್ರತೀ ವಿಷಯಗಳ ಕುರಿತಾಗಿ ಕಾರ್ಯಾಗಾರ ಹಮ್ಮಿಕೊಂಡು ಚರ್ಚಿಸಿ ಫಲಿತಾಂಶ ಉತ್ತಮಗೊಳಿಸಲು ಶ್ರಮಿಸಿ, ಬರುವ ವರ್ಷಗಳಲ್ಲಿ ಇನ್ನೂ ಪ್ರಗತಿಕಾಣಲು ಪ್ರಯತ್ನಿಸಬೇಕು ಎಂದರು.

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ  ಮಲ್ಲೇಶ್‌ ಮಾತನಾಡಿ, ಪರೀಕ್ಷೆಯಲ್ಲಿ ಮಕ್ಕಳು ಫೇಲಾಗದಂತೆ ನೋಡಿಕೊಳ್ಳುವ ಕೆಲಸವಾಗಬೇಕು. ಜಿಲ್ಲೆಯಲ್ಲಿ ಫಲಿತಾಂಶ ಬಂದಾಗ ಎಲ್ಲರೂ ನಮ್ಮನ್ನು ಪ್ರಶ್ನಿಸಿದರು. ಇದೀಗ ನಾವು ಉತ್ತಮ ಫಲಿತಾಂಶಗಳನ್ನು ನೀಡಲು ಸನ್ನಧ್ದರಾಗೋಣ ಎಂದರು.

ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಜಿಲ್ಲಾಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಧ್ಯೇಯವಾಗಿದೆ. ನಾವು ಕೇವಲ ಜಸ್ಟ್35 ಅಂಕಗಳಿಸಿ ಪಾಸ್ ಮಾಡುವ ಬಗ್ಗೆ ಯೋಚಿಸುವ ಬದಲು ನೂರಕ್ಕೆ ನೂರು ಅಂಕ ಪಡೆಯುವಂತೆ ವಿದ್ಯಾರ್ಥಿಗಳಲ್ಲಿ ಶಕ್ತಿ ತುಂಬಬೇಕಿದೆ.  ಇದನ್ನು ಪ್ರಾಥಮಿಕ ಶಾಲೆ, ಪ್ರೌಢಶಾಲಾ ಶಿಕ್ಷಕರು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ. ಮಧ್ಯ ಕರ್ನಾಟಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಸರುಮಾಡಲಿ ಮತ್ತು ಸಿಇಟಿ, ನೀಟ್ ಬಗ್ಗೆ ತಿಳಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್. ಆರ್.ಎಸ್ ಪಿಯು ಕಾಲೇಜು ಪ್ರಾಚಾರ್ಯರಾದ ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕೆಲಸವನ್ನು ನಾವು ಪ್ರಾಮಾಣಿಕತೆಯಿಂದ ಮಾಡಿದರೆ  ಸಾಕು ಜಯಸಿಗುವುದು,  ಅನುತೀರ್ಣವಾಗುವ ವಿದ್ಯಾರ್ಥಿಗಳಿಗೆ ಹೆಚ್ಚು ಗಮನ ಹರಿಸಿ ಜ್ಞಾನ ತುಂಬಬೇಕು ಎಂದರು.

ಈ ಕಾರ್ಯಾಗಾರವು ಜಿಲ್ಲೆಯ ಇಂಗ್ಲೀಷ್‌ ಉಪನ್ಯಾಸಕರಿಗೆ ತುಂಬ ಉಪಯುಕ್ತ ಎನಿಸಿತು, ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಮೂಡಿಸಲು ಅವರಲ್ಲಿ ಸ್ಫೂರ್ತಿ ತುಂಬಲು ಹಾಗೂ ಇಂಗ್ಲೀಷ್‌ ಕಲಿಕೆಯನ್ನು ಎದುರಾಗಬಹುದಾದ ಸವಾಲುಗಳ ಕುರಿತು ಉಪನ್ಯಾಸಕರಾದ   ಚಂದ್ರಿಕಾ, ಹರ್ಷಿತ, ಗಂಗಾಧರ್‌ ಈ, ವೆಂಕಟೇಶ್‌ ಮೂರ್ತಿ ಹಾಗೂ  ನಾಗರಾಜು ಇವರು ಉಪನ್ಯಾಸಗಳನ್ನು ನೀಡಿದರು.

ಎಸ್.ಆರ್.ಎಸ್. ಪಿ.ಯು. ಕಾಲೇಜಿನಲ್ಲಿ ಜಿಲ್ಲೆಯ ಇಂಗ್ಲೀಷ್ ಉಪನ್ಯಾಸಕರಿಗೆ ಫಲಿತಾಂಶ ಸುಧಾರಣೆಗಾಗಿ  ಹಮ್ಮಿಕೊಂಡಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಇಂಗ್ಲಿಷ್ ಉಪನ್ಯಾಸಕ ವೃತ್ತಿಯಿಂದ ನಿವೃತ್ತಿ ಹೊಂದಿದ ಹಿರಿಯೂರು ಎಂ.ಜಿ.ರಂಗಸ್ವಾಮಿ ಮತ್ತು ರಾಮಗಿರಿ ಮಂಜುನಾಥ್ ಅವರನ್ನು ಉಪನಿರ್ದೇಶಕರಾದ ಎನ್.ರಾಜು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಗಣೇಶ್, ಜೆ.ವಿಜಯ್, ಎಂ. ರವೀಶ್, ತಿಪ್ಪೇಸ್ವಾಮಿ, ಗಂಗಾಧರ್,  ಉಪನ್ಯಾಸಕ  ವೆಂಕಟೇಶ್,  ಬೆಳಗಟ್ಟ ನಾಗರಾಜು, ಚಂದ್ರಶೇಖರ್, ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಜಿಲ್ಲಾಧ್ಯಕ್ಷರಾದ ಮಾಲತೇಶ್ ಅರಸ್ ಇತರರು ಉಪಸ್ಥಿತರಿದ್ದರು.

ಕಾರ್ಯಾಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕಿನ ಸುಮಾರು  125 ಕಾಲೇಜುಗಳ ಇಂಗ್ಲೀಷ್‌ ಉಪನ್ಯಾಸಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಯಿತು. ಪ್ರಾಚಾರ್ಯರಾದ ಗಣೇಶ್  ಉಪನ್ಯಾಸಕರ ಸಂಘದ ಅಧ್ಯಕ್ಷರಾದ  ಮಲ್ಲೇಶ್‌, ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ, ಇಂಗ್ಲೀಷ್‌ ಉಪನ್ಯಾಸಕರ ಸಂಘದ ಅಧ್ಯಕ್ಷರಾದ  ವಿಜಯಕುಮಾರ್‌ ,ಹಾಜರಿದ್ದರು. ನಟರಾಜ್‌ ಎಂ ವಿ ಇದ್ದರು.

ಚಿತ್ರದುರ್ಗದ ಎಸ್.ಆರ್.ಎಸ್. ಪಿ.ಯು. ಕಾಲೇಜಿನಲ್ಲಿ ಜಿಲ್ಲೆಯ ಇಂಗ್ಲೀಷ್ ಉಪನ್ಯಾಸಕರಿಗೆ ಫಲಿತಾಂಶ ಸುಧಾರಣೆಗಾಗಿ  ಹಮ್ಮಿಕೊಂಡಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ  ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್ .ರಾಜು ಅವರನ್ನು ಹಾಗೂ ಇಂಗ್ಲಿಷ್ ಉಪನ್ಯಾಸಕ ವೃತ್ತಿಯಿಂದ ನಿವೃತ್ತಿ ಹೊಂದಿದ ಹಿರಿಯೂರು ಎಂ.ಜಿ.ರಂಗಸ್ವಾಮಿ ಮತ್ತು ರಾಮಗಿರಿ ಮಂಜುನಾಥ್ ಅವರನ್ನು ಉಪನಿರ್ದೇಶಕರಾದ ಎನ್.ರಾಜು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಗಣೇಶ್, ಜೆ.ವಿಜಯ್, ಎಂ. ರವೀಶ್, ತಿಪ್ಪೇಸ್ವಾಮಿ, ಗಂಗಾಧರ್,  ಉಪನ್ಯಾಸಕ  ವೆಂಕಟೇಶ್,  ಬೆಳಗಟ್ಟ ನಾಗರಾಜು, ಚಂದ್ರಶೇಖರ್, ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಜಿಲ್ಲಾಧ್ಯಕ್ಷರಾದ ಮಾಲತೇಶ್ ಅರಸ್ ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!