Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ | ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ  ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 16 : ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ  ಅನ್ನದಾನದ ಕಾರ್ಯಕ್ರಮದ ಉದ್ಘಾಟನೆಯನ್ನು ಭಾನುವಾರ ಸಂಸದರಾದ ಗೋವಿಂದ ಕಾರಜೋಳ ರವರು ನೇರವೇರಿಸಿದರು.

ಈ ಸಂದರ್ಭದಲ್ಲಿ ಎಸ್‍ಆರ್‍ಎಸ್ ಸಮೂಹ ಸಂಸ್ಥೆಯ ಲಿಂಗಾರೆಡ್ಡಿ ಮೆದೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿರಂಜನ್, ವಕೀಲ ಫಾತ್ಯರಾಜನ್, ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ಶರಣ್‍ಕುಮಾರ್, ಬಿಜೆಪಿಯ ಮಾಜಿ ಅಧ್ಯಕ್ಷರಾದ ಮುರಳಿ ,ಹೊಸದುರ್ಗ ಅಯ್ಯಪ್ಪ ಸ್ವಾಮಿ ಗುರುಗಳಾದ ಸೈಯದ್, ಮಾತಾ ಇಂಡಸ್ಟ್ರೀಸ್ ಮಾಲೀಕರಾದಂತ ಮಹಾಂತೇಶ್ ಐಶ್ವರ್ಯ ಗ್ರೂಪ್ ಆಫ್ ಹೋಟೆಲ್‍ನ ಅರುಣ್ ಕುಮಾರ್ ಉಪಸ್ಥಿತರಿದ್ದರು. ಗಣ ಹೋಮ, ನವ ಗ್ರಹ ಹೋಮ ,ರುದ್ರ ಹೋಮ ಪೂಜೆ ಮಾಡಲಾಯಿತು.  ಈ ಸಂದರ್ಭದಲ್ಲಿ ನಗರದ ಸಾವಿರಾರು ಭಕ್ತರು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು

ಪ್ರತಿ ವರ್ಷದಂತೆ ಮಾಲೆ ಧರಿಸಿದ ಅಯ್ಯಪ್ಪ ಸ್ವಾಮಿಗಳಿಗೆ ದಿನಾಂಕ 16-11-2025 ರಿಂದ 13-1- 2026 ವರೆಗೆ  60 ದಿನಗಳ ಕಾಲ ಪ್ರತಿನಿತ್ಯ  ಅನ್ನದಾನ  ಕಾರ್ಯಕ್ರಮವನ್ನು ನೆರವೇರಿಸಲಾಗುವುದು. 16-12-2025  ರಿಂದ 21-12-2025 ರವರೆಗೆ 26ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ. 20-.12-2025 ಶನಿವಾರ ಸಂಜೆ 7:ಕ್ಕೆ ಅಯ್ಯಪ್ಪ ಸ್ವಾಮಿ ಪಡಿಪೂಜೆ ಕಾರ್ಯಕ್ರಮ 28- 12-2025 ಭಾನುವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಅನ್ನದಾನ ಕಾರ್ಯಕ್ರಮ 13-01-2026 ಮಂಗಳವಾರ ಸಂಜೆ 6 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ 14-1-2026 ಬುಧವಾರ ಸಂಜೆ 6 ಗಂಟೆಗೆ ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ಇರುತ್ತದೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಎಂ ಪಿ ವೆಂಕಟೇಶ್  ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ಹಾಗೂ  ದೇವಸ್ಥಾನದ ನಿರ್ದೇಶಕರು  ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...