ಚಿತ್ರದುರ್ಗ | ಈಶ್ವರ ದೇವಸ್ಥಾನದಲ್ಲಿ ಕಡೇ ಕಾರ್ತಿಕ ಮಹೋತ್ಸವ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಡಿ. 02 : ನಗರದ ಐಯ್ಯಣ್ಣ ಪೇಟೆಯಲ್ಲಿನ ಬಸವೇಶ್ವರ ಅರ್ಬನ್ ಅಸ್ಪತ್ರೆಯ ಬಳಿಯಲ್ಲಿನ ಈಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಡೇ ಕಾರ್ತಿಕ ಮಹೋತ್ಸವವನ್ನು ನಡೆಸಲಾಯಿತು.

ದೇವಾಲಯದಲ್ಲಿನ ಶಿವನಿಗೆ ಬೆಳಿಗ್ಗೆಯಿಂದಲೇ ಕಾರ್ತಿಕ ಮಹೋತ್ಸವದ ಅಂಗವಾಗಿ ಅಭೀಷೇಕ, ಮಹಾ ರುದ್ರಾಭಿಷೇಕ, ವಿಶೇಷ ಬಿಲ್ವಾರ್ಚನೆ, ಮಂತ್ರರ್ಚಾನೆ ಸೇರಿದಂತೆ ವಿವಿಧ ರೀತಿಯ ಪೂಜೆಗಳನ್ನು ನಡೆಸಲಾಯಿತು.

ದೇವಾಲಯದಲ್ಲಿ ಶಿವನ ಹಿಂದೆ ಕೈಲಾಸದ ರೀತಿಯಲ್ಲಿ ಬೆಳ್ಳಿ ಬೆಟ್ಟದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿತ್ತು,
ಸಂಜೆ 8 ಗಂಟೆಗೆ ಈಶ್ವರನಿಗೆ ಮಹಾ ಮಂಗಳಾರತಿಯ ನಂತರ ನೆರದಿದ್ದ ಭಕ್ತರ ಕೈಯಿಂದ ಕಾರ್ತೀಕ ಮಹೋತ್ಸವದ ಅಂಗವಾಗಿ ದೀಪಗಳನ್ನು ಹಚ್ಚಿಸಲಾಯಿತು. ಇಲ್ಲಿ ನರೆದಿದ್ದ ನೂರಾರು ಭಕ್ತರು ದೀಪಗಳನ್ನು ಹಚ್ಚುವುದರ ಮೂಲಕ ಶಿವನ ಪ್ರೀತಿಗೆ ಪಾತ್ರರಾದರು. ಕಾರ್ತಿಕದÀ ಅಂಗವಾಗಿ ದೇವಾಲಯ ಮತ್ತು ಮುಂದಿನ ಬೀದಿಯನ್ನೆಲ್ಲಾ ವಿಶೇಷವಾಗಿ ವಿವಿಧ ರೀತಿಯ ಹೂಗಳಿಂದ ಹಾಗು ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಕಳೆದ ಹಲವಾರು ವರ್ಷಗಳಿಂದಲೂ ಸಹ ಈಶ್ವರ ದೇವಾಲಯದಲ್ಲಿ ಈ ರೀತಿಯಾದ ಕಾರ್ತಿಕ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಹಲವಾರು ಜನತೆ ನೆರವನ್ನು ನೀಡಿದ್ದಾರೆ.

Share This Article