ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 04 : ನಗರದ ಮದಕರಿನಾಯಕ ವೃತ್ತದ (ಮೆಜೆಸ್ಟಿಕ್ ಸರ್ಕಲ್) ಬಳಿ ನಾಳೆ (ಡಿಸೆಂಬರ್. 05 ರಂದು) ಬೆಳಗ್ಗೆ 10.30 ಕ್ಕೆ ಲೇಬರ್ ಕಾರ್ಡ್ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆ ರಾಜ್ಯಾಧ್ಯಕ್ಷ ಎನ್.ಮಲ್ಲಿಕಾರ್ಜುನ್ ಪಾರ್ಥ ತಿಳಿಸಿದ್ದಾರೆ.
ಶ್ರಮಿಕ ವರ್ಗದ ಬದುಕು ಹಸನುಗೊಳಿಸಲು ಕಾರ್ಮಿಕರ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ. ಮೀಸಲಿದೆ. ಆದರೆ, ಮಾಹಿತಿ ಕೊರತೆ ಕಾರಣಕ್ಕೆ ಫಲಾನುಭವಿಗಳು
ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಲೇಬರ್ ಕಾರ್ಡ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ದಾವಣಗೆರೆ ವೀರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿಯವರು ಸಾನಿಧ್ಯ ವಹಿಸುವರು. ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಡಿವೈಎಸ್ಪಿ ಪಿ.ಕೆ.ದಿನಕರ್, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್.ಅರವಿಂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ತಿಪ್ಪೇಸ್ವಾಮಿ ಜೆಜೆ ಹಟ್ಟಿ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಡಿ.ಎಸ್.ಸುರೇಶಬಾಬು, ನಗರಸಭೆ ಮಾಜಿ
ಅಧ್ಯಕ್ಷ ಎಚ್.ಮಂಜಪ್ಪ, ಸಂಗೊಳ್ಳಿ ರಾಯಣ್ಣ ಸೇನೆ
ಅಧ್ಯಕ್ಷ ಟಿ.ಆನಂದ್ ಇತರರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
