ಚಿತ್ರದುರ್ಗ | ಕೆಪಿಸಿಸಿ ಕಾರ್ಯಧ್ಯಕ್ಷ ಬಿಎನ್ ಚಂದ್ರಪ್ಪರನ್ನು ತರಾಟೆಗೆ ತೆಗೆದುಕೊಂಡ ರೈತರು

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜನವರಿ.23 : ಕೆಪಿಸಿಸಿ ಕಾರ್ಯಧ್ಯಕ್ಷ ಬಿ.ಎನ್ ಚಂದ್ರಪ್ಪರನ್ನು ರೈತರು ತರಾಟಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ನಗರದಲ್ಲಿಂದು ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಟಾನಕ್ಕೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿತ್ತು . ರೈತ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ  ಚಿತ್ರದುರ್ಗ ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಅವರು ಆಗಮಿಸಿ ಭಾಷಣ ಮಾಡುತ್ತಿದ್ದಾಗ ರೈತರು ಬಿ.ಎನ್ ಚಂದ್ರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ಸಂಸದರಾಗಿದ್ದಾಗ ಯಾಕೆ ಭದ್ರಾ ಮೇಲ್ದಂಡೆ ಯೋಜನೆಗೆ ಕಾಮಗಾರಿ ವೇಗ ಮಾಡಲಿಲ್ಲ ಹತ್ತು ವರ್ಷಗಳಿಂದ ಇದನ್ನೇ ಹೇಳಿಕೊಂಡು ಬಂದಿದ್ದೀರಾ ?.ಹೋದ ಸಾರಿ ಹೈಸ್ಕೂಲ್ ಮೈದಾನದಲ್ಲಿ ಇದೇ ತರ ಆಶ್ವಾಸನೆ ನೀಡಿದ್ದಿರಿ. ಆಗ ಯೋಜನೆ ಬಗ್ಗೆ ಗಮನ ಹರಿಸದ ನೀವು ಈಗ ಚುನಾವಣೆ ಹತ್ತಿರ ಬಂದಿದ್ದರಿಂದ ಗಿಮಿಕ್ ಗಾಗಿ ಇಲ್ಲಿ ಬಂದಿದ್ದೀರಿ ಎಂದು ರೈತರು ಬಿ.ಎನ್ ಚಂದ್ರಪ್ಪನನ್ನು ಪ್ರಶ್ನಿಸಿದರು.

ನಿಮ್ಮ ರಾಜಕೀಯವನ್ನು ವಿಧಾನ ಸೌಧ, ಪಾರ್ಲಿಮೆಂಟ್ ನಲ್ಲಿ ಮಾತನಾಡಿ, ಇಲ್ಲಿ ಯಾಕೆ? ಬಂದಿದ್ದೀರಿ, ಹಿಂದೆ ಸಂಸದರಾಗಿದ್ದಾಗಲೂ ಇದೇ ರೀತಿ ಹೇಳಿ ರೈತರನ್ನು ಕಡೆಗಣಿಸಿದ್ದು ಎರಡು ಪಕ್ಷಗಳು ರೈತರಿಗೆ ಮೋಸ ಮಾಡುತ್ತಿರುವುದಾಗಿ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆಯಲ್ಲಿ ಮುಜುಗರಕ್ಕೆ ಒಳಗಾದ ಬಿ.ಎನ್ ಚಂದ್ರಪ್ಪ ಅವರು ನಗು ನಗುತ್ತಲೇ ಭಾಷಣ ಮುಕ್ತಾಯಗೊಳಿಸಿ ಸ್ಥಳದಿಂದ ತೆರಳಿದರು.

Share This Article
Leave a Comment

Leave a Reply

Your email address will not be published. Required fields are marked *