ಚಿತ್ರದುರ್ಗ | ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಕೋಡಿಹಳ್ಳಿ ಟಿ.ಶಿವಮೂರ್ತಿ ನೇಮಕ 

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 06 : ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಶಿವಮೂರ್ತಿ. ಟಿ ರವರನ್ನು ನೇಮಕ ಮಾಡಲಾಗಿದೆ.

ಇವರಿಗೆ ದಲಿತ ಸಾಹಿತ್ಯದ ಬಗೆಗಿನ ಆಸಕ್ತಿ ಹಾಗೂ ದಲಿತ ಸಮುದಾಯದ ಅಭಿವೃದ್ದಿಯ ಚಿಂತನೆಗಳು ಹಾಗೂ ಅವರ ಅಭ್ಯುದಯ, ಸಾಮಾಜಿಕ ಕಾರ್ಯಗಳು ಮತ್ತು ಕನ್ನಡ ನಾಡು ನುಡಿಗಾಗಿ ಇವರು ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ದಲಿತ ಸಾಹಿತ್ಯ ಪರಿಷತ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷರರಾದ ಡಾ.ಅರ್ಜುನ ಗೊಳಸಂಗಿಯವರ ಆದೇಶದ ಮೇರೆಗೆ ಹಾಗೂ ರಾಜ್ಯ ಸಮಿತಿಯ ಒಪ್ಪಿಗೆಯ ಮೇರೆಗೆ ದಲಿತ ಸಾಹಿತ್ಯ ಪರಿಷತ್ ನ ಬೆಂಗಳೂರು ವಿಭಾಗಿಯ ಸಂಯೋಜಕರಾದ ಶ್ರೀಯುತ ಗಣಪತಿ ಗೋ ಛಲವಾದಿ ರವರು ನೇಮಕ ಮಾಡಿರುತ್ತಾರೆ.

ದ.ಸಾ.ಪ ನಿಯಮದಂತೆ ಮೂರು ವರ್ಷಗಳ ಅವಧಿಗೆ ಇವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿರುತ್ತಾರೆ, ಅಲ್ಲದೆ ಇವರನ್ನು ಜಿಲ್ಲಾ ಘಟಕಗಳ ಹಾಗೂ ಎಲ್ಲ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ನೇಮಕ ಸೇರಿದಂತೆ ಜಿಲ್ಲೆಯಲ್ಲಿ ದಲಿತ ಪರ ಸಾಹಿತ್ಯ ಮತ್ತು ಕನ್ನಡ ಪರ ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸಲು ನಿಯಮಗಳಿಗೆ ಒಪ್ಪಿ ಆದೇಶಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *