ಚಿತ್ರದುರ್ಗ ಕಸಾಪ ವತಿಯಿಂದ ಚೈತ್ರದ ಚಿಗುರು ಕವಿಗೋಷ್ಟಿ ; ಯುವ ಹಾಗೂ ಉದಯಹೋನ್ಮುಖ ಕವಿಗಳಿಗೆ ಆಹ್ವಾನ

1 Min Read

ಚಿತ್ರದುರ್ಗ, (ಏ.19) : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯ ಯುವ ಹಾಗೂ ಉದಯೋನ್ಮುಖ ಕವಿಗಳಿಗಾಗಿ ‘ಚೈತ್ರದ ಚಿಗುರು’  ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.

40 ವರ್ಷ ವಯೋಮಾನದ ಒಳಗಿನ ಕವಿಗಳು ತಮ್ಮ ಸ್ವರಚಿತ,ಅಪ್ರಕಟಿತ ಒಂದು ಅಥವ ಎರಡು ಕವನಗಳನ್ನು ಏಪ್ರಿಲ್ 26 ಒಳಗೆ ತಲುಪಿಸಬೇಕು. ಕವನದ ವಿಷಯಕ್ಕೆ ಯಾವುದೇ ಚೌಕಟ್ಟು ಇಲ್ಲ. ಆಯ್ಕೆಯಾದ ಕವನಗಳ ಕವಿಗಳಿಗೆ ಮಾಹಿತಿ ನೀಡಲಾಗುವುದು.

ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಭಾವ ಚಿತ್ರವನ್ನು ಒಳಗೊಂಡ ಕವನವನ್ನು ಇ.ಮೇಲ್ ಅಥವ ವಾಟ್ಸ್‍ಪ್ ಮೂಲಕ ಕಳಿಸಬಹುದಾಗಿದೆ. ಕೈ ಬರಹ ಅಥವ ಟೈಪ್ ಮಾಡಿದ ಕವನಗಳನ್ನು ಪಿಡಿಎಪ್ ರೀತಿಯಲ್ಲಿ ಕಳಿಸಬಹುದಾಗಿದೆ ಎಂದು ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ.
7892006495 9449510078.
ಇ ಮೇಲ್ ವಿಳಾಸ :
dhananjayav43@gmail.com
Shivaswamy2000@gmail.com

Share This Article
Leave a Comment

Leave a Reply

Your email address will not be published. Required fields are marked *