ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ನಗರದ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಡಿಸ್ಟಿಕ್ ಗೌರ್ನರ್ RI 3160 ಎಂ. ಕೆ ರವೀಂದ್ರರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಂಜಿತಾ ಮತ್ತು ಮಾಮಾ ಜಿಗಣಿ ಪ್ರಾರ್ಥಿಸಿದರು. ರಂಜಿತ ಸ್ವಾಗತಿಸಿದರು. ವಂದನಾರ್ಪಣೆಯನ್ನು ಕಾರ್ತಿಕ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಾರ್ತಿಕ್ ಎಂ, ಪಿ.ಎಚ್.ಎಫ್ ಮಾರುತಿ ಮೋಹನ್, ರೊಟೇರಿಯನ್ ಪಿ.ಎಚ್.ಎಫ್ ಉಮೇಶ ವಿ ತುಪ್ಪದ, ಟ್ರಸ್ಟಿಗಳಾದ ಸ್ವಾತಿ ಆನಂದ್, ಶಾಲೆಯ ಮುಖ್ಯ ಶಿಕ್ಷಕಿ ನಂದಾ ಟಿ ಹಾಗೂ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.






