ಸಾಹಿತ್ಯ ಸಮ್ಮೇಳನ ಪೂರ್ವಸಿದ್ದತಾ ಸಭೆಗೆ ಆಹ್ವಾನ
ಸುದ್ದಿಒನ್, ಚಿತ್ರದುರ್ಗ, ಜನವರಿ. 23 : ನಗರದಲ್ಲಿ ಆರು ವರ್ಷಗಳ ನಂತರ ಫೆಬ್ರವರಿ 17 ಮತ್ತು 18 ರಂದು ಜಿಲ್ಲೆಯ 18 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಇದರ ಮೊದಲ ಸಿದ್ಧತೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ನಿಮಿತ್ತವಾಗಿ ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು, ರೈತ ಸಂಘ, ನೌಕರರ ಸಂಘ, ನೀರಾವರಿ ಹೋರಾಟ ಸಮಿತಿ,ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಸಲಹೆ ಮತ್ತು ಸಹಕಾರವನ್ನು ನೀಡಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಿನಾಂಕ 24.01.2016 ರಂದು ಶನಿವಾರ ಸಂಜೆ 4 ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಭೆಯನ್ನು ಕರೆಯಲಾಗಿದೆ. ದಯಮಾಡಿ ಕನ್ನಡ – ಕನ್ನಡಿಗ-ಕರ್ನಾಟಕ ದ ಕಾರ್ಯದಲ್ಲಿ ಜಿಲ್ಲೆಯ ಸಮಸ್ತ ಕನ್ನಡಪರವಾದ ಮನಸ್ಸುಗಳು ತಮ್ಮ ಸಲಹೆ ಮತ್ತು ಸಹಕಾರ ನೀಡಬೇಕೆಂದು ಕಸಾಪ ಜಿಲ್ಲಾಧ್ಯಕ್ಷರಾದ ಕೆ.ಎಂ. ಶಿವಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9972155177, 9449510078
ಕನ್ನಡ ಸಾಹಿತ್ಯ ಪರಿಷತ್ತು, ಚಿತ್ರದುರ್ಗ.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇವರನ್ನು ಸಂಪರ್ಕಿಸಲು ಕೋರಿದೆ.















