ಚಿತ್ರದುರ್ಗ | ಪ್ರಶಾಂತಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

1 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 21 : ಯೋಗಾಭ್ಯಾಸಕ್ಕೆ ವಯಸ್ಸು ಮುಖ್ಯವಲ್ಲ. ಕಲಿಯುವ ಆಸಕ್ತಿಯಿರಬೇಕೆಂದು ಐ.ಯು.ಡಿ.ಪಿ. ಬಡಾವಣೆಯ ನಿಸರ್ಗ ಯೋಗ ಕೇಂದ್ರದ ಯೋಗ ಗುರು ಶಿವಲಿಂಗಪ್ಪ ತಿಳಿಸಿದರು.

ಐ.ಯು.ಡಿ.ಪಿ. ಬಡಾವಣೆಯಲ್ಲಿರುವ ಪ್ರಶಾಂತಿ ವಿದ್ಯಾಲಯದಲ್ಲಿ ಹತ್ತನೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ಯೋಗ ಇಂದು ಹೆಮ್ಮರವಾಗಿ ಬೆಳೆದಿದ್ದು, ವೈದ್ಯಕೀಯ ಲೋಕಕ್ಕೆ ಸವಾಲಾಗಿ ನಿಂತಿದೆ. ಔಷಧೋಪಚಾರಗಳಿಂದ ಗುಣವಾಗದ ರೋಗಗಳನ್ನು ವಾಸಿ ಮಾಡುವ ಶಕ್ತಿ ಯೋಗಕ್ಕಿದೆ. ಹೀಗಾಗಿ ದೇಶ ವಿದೇಶಗಳಲ್ಲೂ ಯೋಗಕ್ಕೆ ಮಹತ್ವವಿದೆ ಎಂದರು.

ಹವ್ಯಾಸಿ ಯೋಗ ಪಟುಗಳಾದ ಜಯಣ್ಣ, ಪುಷ್ಪ, ಸಂಯುಕ್ತ, ದಿವ್ಯ ಇವರುಗಳ ಆಕರ್ಷಕ ಯೋಗ ಪ್ರದರ್ಶನವನ್ನು ಕಂಡು ನೆರದಿದ್ದವರು ಪುಳಕಿತರಾದರು.

ಪ್ರಶಾಂತಿ ಶಾಲೆಯ ಮುಖ್ಯಸ್ಥರಾದ ರಮೇಶ್ ಇಟಗಿ, ಶಿಕ್ಷಕಿಯರುಗಳಾದ ಸಂಪದ, ಸಂಧ್ಯಾ ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *