Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ “ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜೂನ್.21 : ಯೋಗ ಬಲ್ಲವನಿಗೆ ರೋಗವಿಲ್ಲ”. ‘ಅಹಂ’ ನಿಂದ ‘ಸ್ವಯಂ’ ಕಡೆಗೆ ಹೋಗುವ ಯೋಗ, ವಿಶ್ವದಾದ್ಯಂತ ಪ್ರತಿ ವರ್ಷ ಆಚರಿಸಲಾಗುತ್ತದೆ, ಯೋಗ ಭಾರತದಲ್ಲಿ ಹುಟ್ಟಿದ ಜಾಗತಿಕ ವಿದ್ಯೆ, ಇದು ವಿಶ್ವದಾದ್ಯಂತ ಹರಡಿ ಪ್ರಖ್ಯಾತಿ ಪಡೆದಿದೆ ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ಎಸ್‍ಜೆ  ಹೇಳಿದರು.

ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ  “ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧ್ಯಾತ್ಮಿಕ ಮತ್ತು ಆರೋಗ್ಯ ಎರಡು ಮುಖದಿಂದಲೂ ತನ್ನನ್ನೂ ನಂಬಿದವರನ್ನೂ ಪೊರೆಯಬಲ್ಲ ಪಾರಂಪರಿಕ ಕಲೆಯಾಗಿ ತನ್ನದೆಯಾದ ವಿಶೇಷ ಗುಣಗಳಿಂದ ಜನರ ಆರೋಗ್ಯ ಕಾಪಾಡುವಲ್ಲಿ ಉತ್ತಮ ಪಾತ್ರವಹಿಸುತ್ತದೆ. ಮನುಷ್ಯನಿಗೆ ಬಾಹ್ಯ ಮತ್ತು ಆಂತರಿಕ ಸೌಂದರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಎ. ಲಿಂಗಾರೆಡ್ಡಿಯವರು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಯೋಗ ಕ್ರಿಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಚಿನ್ಮಯಾನಂದ ಅವರು ಭಾಗವಹಿಸಿ,
ಎಸ್‍ಆರ್‍ಎಸ್‍ ಬೃಹತ್‍ ಅನಂತ ಕೃಷ್ಣ  ಸಭಾಂಗಣದಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ  ಸಂಸ್ಕೃತ ಶ್ಲೋಕದೊಂದಿಗೆ ಓಂಕಾರ ಉಚ್ಛಾರಣೆ ಹಾಗೂ ಯೋಗಾಸನಗಳು ಮತ್ತು ಪ್ರಾಣಾಯಾಮ, ಧ್ಯಾನ ಮತ್ತು ಯೋಗದ ನಾನಾ ಭಂಗಿಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸಿದರು.

ಅಂತಾರಾಷ್ಟ್ರೀಯ ಯೋಗದಿನವನ್ನು ಒಂದು ಸ್ಮರಣೀಯ ದಿನವನ್ನಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ರವಿ ಟಿ. ಆಡಳಿತಾಧಿಕಾರಿಗಳು, ಶಾಲೆಯ ಪ್ರಾಂಶುಪಾಲರುಗಳಾದ ಶ್ರಿಯುತ ಪ್ರಭಾಕರ್ ಎಮ್ ಎಸ್(ಸಿಬಿಎಸ್‍ಇ) ಹಾಗೂ ಶ್ರೀಮತಿ ಅರ್ಪಿತ ಎಮ್ ಎಸ್ (ಐಸಿಎಸ್‍ಇ) ಮತ್ತು, ಕೋ-ಆರ್ಡಿನೇಟರ್‍ಗಳು ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿ ಯುದ್ಧ : ಶಿಶಿರ್ ಗೆ ಸವಾಲು ಹಾಕಿದ ಚೈತ್ರಾ..!

ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಶಿಶಿರ್ ಹಾಗೂ ಚೈತ್ರಾ ಅಣ್ಣ ತಂಗಿಯಂತೆ. ಚೈತ್ರಾ ಕುಗ್ಗಿದಾಗೆಲ್ಲ ಶಿಶಿರ್ ಧೈರ್ಯ ತುಂಬಿದ್ದಾರೆ. ಅದಕ್ಕಾಗಿಯೇ ಬಿಗ್ ಬಾಸ್ ತಂಗಿ ನಿನಗಾಗಿ ಎಂಬ ಫೋಸ್ಟರ್ ಅನ್ನೇ ರಿಲೀಸ್

ಬ್ಯಾಂಕ್‍ಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮದಾನ

ಚಿತ್ರದುರ್ಗ. ನ.21: ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರೆದರೆ

error: Content is protected !!