ಚಿತ್ರದುರ್ಗ : ಮಡಿವಾಳರ ವಿದ್ಯಾರ್ಥಿನಿಲಯ ನಾಮಫಲಕ ಉದ್ಘಾಟನೆ

1 Min Read

ವರದಿ ಮತ್ತು ಫೋಟೋ ಕೃಪೆ                      ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಮಡಿವಾಳ ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುವಂತೆ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ರಾಮಜ್ಜ ಒತ್ತಾಯಿಸಿದರು.

ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ಚಿತ್ರದುರ್ಗ ಮಡಿವಾಳರ ಸಂಘದಿಂದ ಮಡಿವಾಳರ ವಿದ್ಯಾರ್ಥಿನಿಲಯ ನಾಮ ಫಲಕ ಉದ್ಗಾಟಿಸಿ ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ ಅನುಕೂಲ ಮಾಡುವ ಉದ್ದೇಶದಿಂದ ವಿದ್ಯಾರ್ಥಿನಿಲಯ ನಾಮಫಲಕ ಉದ್ಗಾಟಿಸಿದ್ದು, ಮುಂದೆ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು. ಇದಕ್ಕೆ ಸರ್ಕಾರ ಅನುದಾನ ನೀಡಿ ನಮ್ಮ ಜನಾಂಗದ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದು, ನಿಮಗ ಮಂಡಳಿಗಳ ನೇಮಕದಲ್ಲಿ ಮಡಿವಾಳ ಜನಾಂಗಕ್ಕೆ ಆದ್ಯತೆ ನೀಡಿಲ್ಲ. ನಮ್ಮ ಸಮಾಜಕ್ಕೆ ಎಂ.ಎಲ್.ಸಿ. ಸ್ಥಾನ ನೀಡುವಂತೆ ಬಿ.ರಾಮಜ್ಜ ವಿನಂತಿಸಿದರು.

ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜ್, ಉಪಾಧ್ಯಕ್ಷ ಲಕ್ಷ್ಮಣಪ್ಪ, ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಪಿ.ಶಿವಲಿಂಗಪ್ಪ
ನಿರ್ದೇಶಕರುಗಳಾದ ಪ್ರಕಾಶ್, ಚಂದ್ರಪ್ಪ, ಪುರಷೋತ್ತಮ, ರುದ್ರಸ್ವಾಮಿ, ರಮೇಶ್, ಶ್ರೀನಿವಾಸ್, ಯಲ್ಲಪ್ಪ, ಎಸ್.ಮಂಜುನಾಥ್, ಪರಶುರಾಮ, ರಂಗಸ್ವಾಮಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *