ಚಿತ್ರದುರ್ಗ : ಕಾಮ್ರೆಡ್ ಜಿ.ಚಂದ್ರಪ್ಪ ಭವನ ಉದ್ಘಾಟನೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಚಿತ್ರದುರ್ಗ : ಕಮ್ಯುನಿಸ್ಟ್ ಪಾರ್ಟಿಗೆ ಹೋರಾಟ, ತ್ಯಾಗ, ಬಲಿದಾನದ ಇತಿಹಾಸವಿದೆ ಎಂದು ಸಿ.ಪಿ.ಐ. ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.

ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎ.ಐ.ಟಿ.ಯು.ಸಿ. ವತಿಯಿಂದ ಯೂನಿಯನ್ ಪಾರ್ಕ್ ಎದುರು ನಿರ್ಮಿಸಿರುವ ಕಾಮ್ರೆಡ್ ಕೆ.ಚಂದ್ರಪ್ಪ ಭವನ ಉದ್ಗಾಟಿಸಿ ಮಾತನಾಡಿದರು.
ಕಾಂ.ಜಿ.ಚಂದ್ರಪ್ಪನವರ ಹೆಸರಿನಲ್ಲಿ ಉದ್ಗಾಟನೆಗೊಂಡಿರುವ ಭವನ ಕೇವಲ ಭವನವಾಗಿ ಉಳಿಯಬಾರದು. ಜನ ಚಳುವಳಿಯ ಕೇಂದ್ರವಾಗಬೇಕು. ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ದೊಡ್ಡ ಮಟ್ಟದಲ್ಲಿ ಆಗಬೇಕು. ಭವನದಲ್ಲಿ ಸಭೆ ಸಮಾರಂಭಗಳಷ್ಟೆ ಅಲ್ಲ. ರೈತರು, ಮಹಿಳೆಯರು, ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಳುವ ಸರ್ಕಾರಗಳ ವಿರುದ್ದ ಹೋರಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಚಳುವಳಿಯನ್ನು ಮುನ್ನಡೆಸಿಕೊಂಡು ಹೋಗಬೇಕಾಗಿರುವುದರಿಂದ ನಿಷ್ಠಾವಂತ ಕಾರ್ಯಕರ್ತರು, ನಾಯಕರುಗಳು ಕಮ್ಯುನಿಸ್ಟ್ ಪಾರ್ಟಿಗೆ ಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್. ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡಿದೆ. ಕಮ್ಯುನಿಸ್ಟ್ ಪಾರ್ಟಿಗಾಗಿ ಜೀವ ಕೊಡಲು ಸಿದ್ದವಿದೆ. ಅಧಿಕಾರ, ಕುರ್ಚಿಗಾಗಿ ಅಲ್ಲ. ರೋಟಿ, ಕಪ್‍ಡ, ಔರ್ ಮಖಾನ್ ಕಮ್ಯುನಿಸ್ಟ್ ಪಾರ್ಟಿಯ ಧ್ಯೇಯವಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಬಡವರಿಗೆ ಸರ್ಕಾರದಿಂದ ವಸತಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ನಿರಂತರವಾಗಿ ಹೋರಾಡೋಣ. ಇದಕ್ಕೆ ಕಾರ್ಯಕರ್ತರು ಬೆಂಬಲವಾಗಿರಬೇಕೆಂದು ಕಾಂ.ಸಾತಿ ಸುಂದರೇಶ್ ಕರೆ ನೀಡಿದರು.

ಸಿ.ಪಿ.ಐ.ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ರಾಜ್ಯ ಮಂಡಳಿ ಸದಸ್ಯ ಕಾಂ.ಸಿ.ವೈ.ಶಿವರುದ್ರಪ್ಪ, ಎ.ಐ.ಟಿ.ಯು.ಸಿ. ರಾಜ್ಯ ಸಮಿತಿ ಉಪಾಧ್ಯಕ್ಷ ಕಾಂ.ಟಿ.ಆರ್.ಉಮಾಪತಿ
ಕಾಂ.ದೊಡ್ಡುಳ್ಳಾರ್ತಿ ಕರಿಯಣ್ಣ, ಎ.ಐ.ಟಿ.ಯು.ಸಿ.ಜಿಲ್ಲಾ ಮಂಡಳಿ ಅಧ್ಯಕ್ಷ ಕಾಂ.ಬಿ.ಬಸವರಾಜ್ ವೇದಿಕೆಯಲ್ಲಿದ್ದರು.
ಕಾಂ.ಈ.ಸತ್ಯಕೀರ್ತಿ ಸೇರಿದಂತೆ ಕಮ್ಯುನಿಸ್ಟ್ ಕಾರ್ಯಕರ್ತರು ಭವನ ಉದ್ಗಾಟನೆಯಲ್ಲಿ ಪಾಲ್ಗೊಂಡಿದ್ದರು.
ದಾವಣಗೆರೆ ಇಷ್ಟಾ ಸಂಘಟನೆಯವರು ಕ್ರಾಂತಿಗೀತೆಗಳನ್ನು ಹಾಡಿದರು.

Share This Article
Leave a Comment

Leave a Reply

Your email address will not be published. Required fields are marked *